ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರಿಗೆ ಸನ್ಮಾನ ಕಾರ್ಯಕ್ರಮ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮೇರಿಹಿಲ್ ಮಂಗಳೂರು ಕಛೇರಿಯಲ್ಲಿ ಮಂಗಳವಾರ ನಾಲ್ಕು ಗೃಹರಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಮಂಗಳೂರು ಘಟಕದ ಗೃಹರಕ್ಷಕರಾದ ಸಂತೋಷ್ ರಾಜನ್, ಮೆಟಲ್ ಸಂಖ್ಯೆ 4, ಹೊನ್ನಪ್ಪ, ಮೆಟಲ್ ಸಂಖ್ಯೆ 805, ಸಬಿತಾ, ಮೆಟಲ್ ಸಂಖ್ಯೆ 90 ಮತ್ತು ಸರಸ್ವತಿ ಮೆಟಲ್ ಸಂಖ್ಯೆ 63 ಇವರುಗಳನ್ನು ಎನ್‍ಸಿಸಿ 5 ನಾವೆಲ್  ಮಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭ 03-9-2023 ರಿಂದ 23-10-2023ರ ವರೆಗೆ ನಡೆದ ಎನ್‍ಸಿಸಿ ಕ್ಯಾಂಪ್‍ನಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿರುವುದಕ್ಕೆ ಎನ್‍ಸಿಸಿ ಇಲಾಖೆ ಇವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿರುತ್ತಾರೆ. 


ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ  ಡಾ|| ಮುರಲೀಮೋಹನ್ ಚೂಂತಾರು ರವರು ಮಾತನಾಡಿ ಸದರಿ ಗೃಹರಕ್ಷಕರುಗಳು ಸ್ವಾರ್ಥ ರಹಿತ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಅನೇಕ ಬಂದೋಬಸ್ತ್ ಕರ್ತವ್ಯ, ಕವಾಯತು, ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ ಹಾಗೂ ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದು, ಮಂಗಳೂರು ಘಟಕದ ಸಕ್ರಿಯ ಗೃಹರಕ್ಷಕ ಸದಸ್ಯರಾಗಿರುತ್ತಾರೆ. ಇವರ ಪ್ರಾಮಾಣಿಕ, ಅತ್ಯುತ್ತಮ ಸೇವೆಯನ್ನು ಗುರುತಿಸಿ, ಗೌರವಿಸಿ ಅವರನ್ನು ಸನ್ಮಾನಿಸಲಾಗಿದೆ. ಇವರ ಶ್ಲಾಘನೀಯ ಸೇವೆಗೆ ಕೇಂದ್ರ ಕಛೇರಿಗೆ ನಗದು ಬಹುಮಾನವನ್ನು ಪಡೆಯಲು ಶಿಫಾರಸ್ಸು ಮಾಡಲಾಗಿದೆ ಎಂದರು.


ಈ ಸಂದರ್ಭದಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ  ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಹಾಗೂ ಗೃಹರಕ್ಷಕರಾದ ಸುಲೋಚನಾ, ಖತೀಜಮ್ಮ, ಭವ್ಯಶ್ರೀ, ಕನಕಪ್ಪ ಮತ್ತು ದಿವಾಕರ ಮುಂತಾದವರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top