ಕ್ರಾಸ್ ಕಂಟ್ರಿ: ಆಳ್ವಾಸ್ ಸತತ 20ನೇ ವರ್ಷ ಚಾಂಪಿಯನ್

Upayuktha
0

ಮೂಡುಬಿದಿರೆ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನವೆಂಬರ್ 4 ಮತ್ತು 5ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಫ್‍ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 20ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 


ಪುರುಷರ ವಿಭಾಗದಲ್ಲಿ ಮೊದಲ ಆರು ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಚಂದನ್ ಯಾದವ್ (ಪ್ರಥಮ), ಅಂಕಿತ್ ದೇಶ್ವಾಲ್ (ದ್ವಿತೀಯ), ಆಸಿಫ್ ಖಾನ್ (ತೃತೀಯ), ಸುನಿಲ್ ಕುಮಾರ್ (4ನೇ ಸ್ಥಾನ), ಅಕ್ಷಯ್ ಕುಮಾರ್ (5ನೇ ಸ್ಥಾನ), ಅರವಿಂದ್ ಯಾದವ್ (6ನೇ ಸ್ಥಾನ) ಪಡೆದಿದ್ದಾರೆ. 


ಮಹಿಳೆಯರ ವಿಭಾಗದಲ್ಲಿ ಸೋನುನೆ ಪೂನಂ ದಿನಕರ್ (ಪ್ರಥಮ), ಬಸಂತಿ ಕುಮಾರಿ (ದ್ವಿತೀಯ), ಕೆ.ಎಂ.ಸೋನಿಯಾ (ತೃತೀಯ), ಚೈತ್ರಾ ದೇವಾಡಿಗ (4ನೇ ಸ್ಥಾನ), ದಿಶಾ ಬೋರ್ಶೆ (6ನೇ ಸ್ಥಾನ), ಕೆ.ಎಂ. ಅಂಜಲಿ (7ನೇ ಸ್ಥಾನ) ಪಡೆದಿದ್ದಾರೆ.  ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶ್ಲಾಘಿಸಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top