ಲಯನ್ ಜಿಲ್ಲಾ ಮಟ್ಟದ ‘ಲಯನ್ಸ್ ಸಿಂಗಿಂಗ್ ಸ್ಟಾರ್ಸ್’

Upayuktha
0



ಮಂಗಳೂರು: ಲಯನ್ ಜಿಲ್ಲಾ ಮಟ್ಟದ ‘ಲಯನ್ಸ್ ಸಿಂಗಿಂಗ್ ಸ್ಟಾರ್ಸ್’ ಕಾರ್ಯಕ್ರಮ  ಲಯನ್ ಸೇವಾ ಮಂದಿರದಲ್ಲಿ ಯಶಸ್ವಿಯಾಗಿ ಇತ್ತೀಚೆಗೆ ನೆರವೇರಿತು. 130 ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿದರು.



ಸಭಾ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆ ಕುಮಾರಿ ಅಪೇಕ್ಷಾ ಪೈ ಹಾಗೂ ಕುಮಾರಿ ತನುಶ್ರೀ ಇವರನ್ನು ಸನ್ಮಾನ ಪತ್ರ ಹಾಗೂ ರು.5000 ಕೊಟ್ಟು ಸನ್ಮಾನಿಸಲಾಯಿತು.



ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ ಗವರ್ನರ್ ಲ| ಡಾ| ಮೆಲ್ವಿನ್ ಡಿಸೋಜಾ ದಂಪತಿಗಳು, ಕಾರ್ಯಕ್ರಮದ ಮುಖ್ಯ ಸಂಯೋಜಕ ಲ| ಸೈಮನ್ ಲೋಬೊ, ಉಪಸಂಯೋಜಕರು, ಜಿಲ್ಲಾ ಸಂಪುಟ ಸದಸ್ಯರು, ಜಿಲ್ಲಾ ಲಿಯೋ ಅಧ್ಯಕ್ಷೆ ಡಾ| ರಂಜಿತಾ ಶೆಟ್ಟಿ, ಮುಖ್ಯ ಸಲಹೆಗಾರರಾಗಿ 2ಟಿಜ ವೈಸ್ ಜಿಲ್ಲಾ ಗವರ್ನರ್ ಲ| ಅರವಿಂದ್ ಶೆಣೈ ಹಾಜರಿದ್ದರು. ಪ್ರಾಂತೀಯ ಮಟ್ಟದ ಅಂತಾಕ್ಷರಿ ಸ್ಪರ್ಧೆಯನ್ನು ಲ| ಕುಂಬ್ಳೆ ನರಸಿಂಹ ಪ್ರಭು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter      

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top