ಬೆಂಗಳೂರಿನ ಗಾಂಧಿ ಭವನದಲ್ಲಿ ಗ್ರಂಥಾಲಯ ಸಪ್ತಾಹ ಆಚರಣೆ

Upayuktha
0



ಬೆಂಗಳೂರು: ಇಲ್ಲಿನ ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಗಾಂಧಿ ಭವನದ ಆವರಣದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಶಾಖೆಯಲ್ಲಿ ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಸ್ಮರಣಾರ್ಥ  ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು  ಹಮ್ಮಿಕೊಳ್ಳಲಾಗಿತ್ತು.




ಕಾರ್ಯಕ್ರಮವನ್ನು ಉದ್ಘಾಟಿಸಿದ ಗಾಂಧಿ ಭವನದ ಕಾರ್ಯದರ್ಶಿ ಇಂದಿರ ಕೃಷ್ಣಪ್ಪ ಮಾತನಾಡುತ್ತಾ ದೇವಾಲಯಗಳಿಗೆ ಹೋದರೆ ಕಣ್ಣು ಮುಚ್ಚಿ ಪ್ರಾರ್ಥಿಸಲಾಗುತ್ತದೆ ಅದರಂತೆ ಗ್ರಂಥಾಲಯಗಳಿಗೆ ಬಂದರೆ ಕಣ್ಣು ತೆಗೆದು ಜ್ಞಾನವನ್ನು ಪಡೆಯಬಹುದು, ಗ್ರಂಥಾಲಯಗಳು ಸರಸ್ವತಿ ಸದನ, ಜ್ಞಾನದ ಬಂಢಾರವಾಗಿದ್ದು ಸಾರ್ವಜನಿಕರು ಇಲ್ಲಿ ಉಪಲಬ್ಧವಿರುವ ವಿವಿಧ ಭಾಷೆಯ ನಾನಾ ರೀತಿಯ ಪುಸ್ತಕ -ಪತ್ರಿಕೆ ಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಪಡೆದುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.




ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ವೋದಯ ಮಂಡಲದ ನಗರ ಜಿಲ್ಲಾ ಅಧ್ಯಕ್ಷ ಡಾ.ಗುರುರಾಜ ಪೋಶೆಟ್ಟಿಹಳ್ಳಿ ,ಕಾರ್ಯದರ್ಶಿ ಮತ್ತು ಪತ್ರಕರ್ತೆ ಸುಮಾ ಚಂದ್ರಶೇಖರ್, ಕ ಗಾ ಸ್ಮ ನಿ ವ್ಯವಸ್ಥಾಪಕ ಯೋಗೇಶ್, ಸುಶೀಲಮ್ಮ , ಚಂದ್ರಪ್ಪ, ನವೀನ್  ಗ್ರಂಥಾಲಯ ನಿರ್ವಾಹಕಿ ಶಶಿಕಲ ಮತ್ತಿತರರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top