ವೈಯಕ್ತಿಕ ಕಲಿಕೆಯಲ್ಲೂ ವಿಸ್ತೃತ ಚಿಂತನೆ ಇರಲಿ: ಡಾ.ಕುರಿಯನ್

Upayuktha
0

 ಆಳ್ವಾಸ್ ಕಾಲೇಜಿನಲ್ಲಿ ಎಸ್‍ಡಿಎಂ ವಿದ್ಯಾರ್ಥಿಗಳಿಗೆ ಅನಿಮೇಶನ್, ಆಫ್ಟರ್ ಎಫೆಕ್ಟರ್ ಶಿಬಿರ 



ವಿದ್ಯಾಗಿರಿ
: ‘ವೈಯಕ್ತಿಕ ಕಲಿಕೆಯಲ್ಲೂ ವಿಸ್ತೃತ ಚಿಂತನೆ ಇರಬೇಕು. ಒಳಿತು ಬದುಕಿನ ಧ್ಯೇಯವಾಗಬೇಕು’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. 




ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ವಿಜ್ಞಾನ ಪದವಿಯ ಅನಿಮೇಶನ್ ವಿಭಾಗದ ಸಹಯೋಗದಲ್ಲಿ ಉಜಿರೆಯ ಎಸ್‍ಡಿಎಂ ಕಾಲೇಜಿನ ಬಿವೊಕ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ’10 ದಿನಗಳ ಅನಿಮೇಶನ್ ಮತ್ತು ಆಫ್ಟರ್ ಎಫೆಕ್ಟ್ ಪ್ರಶಿಕ್ಷಣಾರ್ಥಿ ಶಿಬಿರ’ದಲ್ಲಿ  ಮಾತನಾಡಿದರು. ಬದುಕಿನಲ್ಲಿ ಗುಣಾತ್ಮಕ ಹಾಗೂ ಧನಾತ್ಮಕ ಚಿಂತನೆ ಇದ್ದಾಗ, ತಂತ್ರಜ್ಞಾನದಲ್ಲೂ ಒಳಿತನ್ನೇ ಮಾಡಬಹುದು. ಅತಿ ಬಳಕೆಯಿಂದ ಉಪಯುಕ್ತ ವಸ್ತುವೂ ಅಪಾಯಕಾರಿ ಆಗಬಹುದು. ಈ ಕುರಿತ ಎಚ್ಚರಗಳು ನಮ್ಮೊಳಗೆ ಸದಾ ಇರಬೇಕು. ಮೊಬೈಲ್‍ನ ಗುಣಾವಗುಣಗಳು ಅದರ ಬಳಕೆಯ ಮೇಲೆ ನಿಂತಿದೆ. ಅಂತೆಯೇ ಬದುಕು ಕೂಡಾ’ ಎಂದು ವಿವರಿಸಿದರು.  ಹಾಸ್ಟೆಲ್ ಎಂದರೆ ಕೇವಲ ಊಟ-ವಾಸ್ತವ್ಯದ ಗೂಡಲ್ಲ. ಹಾಸ್ಟೆಲ್ ಜೀವನ ಕಲಿಕೆಯ ಕೇಂದ್ರ. ಬದುಕಿನ ಪ್ರಗತಿಯ ತಾಣ’ ಎಂದು ಬಣ್ಣಿಸಿದರು.  




ಒಳ್ಳೆಯ ವಿದ್ಯಾರ್ಥಿಗಳನ್ನು ಸೃಜಿಸುವುದೇ ಶಿಕ್ಷಣ ಸಂಸ್ಥೆಯ ಗುರಿ. ಕಲಿಕಾ ವಿನಿಮಯವು ಶಿಕ್ಷಣದ ಉನ್ನತೀಕರಣ. ಇದೇ ಧ್ಯೇಯವನ್ನು ಇರಿಸಿಕೊಂಡ ಆಳ್ವಾಸ್ ಹಾಗೂ ಎಸ್‍ಡಿಎಂ ನಡುವೆ ಅವಿನಾಭಾವ ಸಂಬಂಧವಿದೆ’ ಎಂದು ಸಂತಸ ವ್ಯಕ್ತಪಡಿಸಿದರು. 



ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಹೆತ್ತವರ ಮೊಗದಲ್ಲಿನ ನಗುವೇ ನಿಮ್ಮ ನೋಟಕ್ಕೆ ಸಿಗುವ ಶ್ರೇಷ್ಠ ಕ್ಷಣ. ಆ ಕ್ಷಣದ ಸೃಷ್ಟಿಕರ್ತರು ನೀವಾದರೆ, ಬದುಕು ಸಾರ್ಥಕ. ಯಾವುದೇ ತರಬೇತಿ ಅಥವಾ ಕಾರ್ಯದ ಸಂದರ್ಭದಲ್ಲಿ ಗುರಿ ಬಗ್ಗೆ ಸದಾ ಜಾಗೃತರಾಗಿರಬೇಕು’ ಎಂದರು. 




ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಹಾಗೂ ಅನಿಮೇಶನ್ ವಿಭಾಗದ ಸಂಯೋಜಕ ರವಿಚಂದ್ರ ಮೂಡುಕೊಣಾಜೆ ಇದ್ದರು. ವಿದ್ಯಾರ್ಥಿನಿ ತನ್ಮಯಿ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ವಿ. ಪ್ರಾರ್ಥನೆ ಹಾಡಿದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top