ದತ್ತಿನಿಧಿ ಸ್ಪರ್ಧೆಗಾಗಿ ಸಾಹಿತ್ಯ ಕೃತಿಗಳ ಆಹ್ವಾನ

Upayuktha
0


ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ವ್ಯಾಪ್ತಿಯ ಕರಾವಳಿ ಲೇಖಕಿ, ವಾಚಕಿಯರ ಸಂಘದ ವತಿಯಿಂದ ದತ್ತಿ ನಿಧಿ ಸ್ಪರ್ಧೆಗಾಗಿ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.



ಸಣ್ಣ ಕತೆಗಳ ಸಂಕಲನ: 2023, ಜನವರಿಯಿಂದ ಡಿ. 31ರೊಳಗೆ ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲೆಗಳ ಲೇಖಕಿಯರಿಂದ ಪ್ರಕಟಿತ ಅತ್ಯುತ್ತಮ ಕಥಾ ಸಂಕಲನಕ್ಕೆ ಹಿರಿಯಡ್ಕದ ಯಶೋದಾ ಜೆನ್ನಿ ಸ್ಮೃತಿ ಸಂಚಯದಿಂದ ಬಹುಮಾನ ನೀಡಲಾಗುವುದು.



ಏಕಾಂಕ ನಾಟಕ ಹಸ್ತಪ್ರತಿ ಸ್ಪರ್ಧೆ:

ಒಂದು ಗಂಟೆ ಅವಧಿಯಲ್ಲಿ ಅಭಿನಯಿಸಬಹುದಾದ (ಫುಲ್‍ಸ್ಕೇಪ್ ಹಾಳೆಯಲ್ಲಿ ಡಿಟಿಪಿ ಮಾಡಿದ 30ರಿಂದ 35 ಪುಟ) ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲೇಖಕಿಯರಿಂದ ರಚಿತ ಸಾಮಾಜಿಕ, ಚಾರಿತ್ರಿಕ, ಪೌರಾಣಿಕ ನಾಟಕದ ಉತ್ತಮ ಹಸ್ತಪ್ರತಿ ಕೃತಿಗೆ ಆತ್ರಾಡಿ ಸಂದೀಪ ಸಾಹಿತ್ಯ ಪ್ರಕಾಶನದಿಂದ ಬಹುಮಾನ ನೀಡಲಾಗುವುದು.



ಸಣ್ಣ ಕತೆಗಳ ಸಂಕಲನ ಹಾಗೂ ಏಕಾಂಕ ನಾಟಕ ಹಸ್ತಪ್ರತಿಯನ್ನು (ಎರಡೆರಡು ಪ್ರತಿ) 2024, ಜ. 30ರೊಳಗೆ ಅಧ್ಯಕ್ಷೆ/ಕಾರ್ಯದರ್ಶಿ, ಕರಾವಳಿ ಲೇಖಕಿ, ವಾಚಕಿಯರ ಸಂಘ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು), ಸಾಹಿತ್ಯ ಸದನ, ಉರ್ವ ಸ್ಟೋರ್, ಅಂಚೆ ಕಚೇರಿ ಬಳಿ, ಅಶೋಕ ನಗರ, ಮಂಗಳೂರು-6 ಈ ವಿಳಾಸಕ್ಕೆ ಕಳುಹಿಸಬೇಕು ಎಂದು‌ ಲೇಖಕಿ ಇಂದಿರಾ ಹಾಲಂಬಿ ತಿಳಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top