ಮಂಗಳೂರು: 'ರೆಡಿ ಟು ಈಟ್' ರಾಗಿ ಉತ್ಪನ್ನಗಳು, ವಿವಿಧ ಪೇಸ್ಟ್‍ಗಳು ಮತ್ತು ಭಾರತೀಯ ನೈಸರ್ಗಿಕ ಮಸಾಲೆಗಳನ್ನು ಬಳಸಿ, ಯಾವುದೇ ಕೃತಕ ಸಂರಕ್ಷಕಗಳನ್ನು ಸೇರಿಸದೇ ತಯಾರಿಸಿದ ಆಹಾರೋತ್ಪನ್ನಗಳಿಗೆ ಹೆಸರುವಾಸಿಯಾದ ಸ್ವದೇಶಿ ಕಂಪನಿಯಾದ ಇಂದಿರಾ ಫುಡ್ಸ್, ತನ್ನ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಗಳನ್ನು ಪ್ರಕಟಿಸಿದೆ.
ಇದೇ ಮೊದಲ ಬಾರಿಗೆ ರಸಂ ಪೇಸ್ಟ್ ಬಿಡುಗಡೆ ಮತ್ತು ಹೊಸ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಪರಿಚಯಸಲು ಕಂಪನಿ ಮುಂದಾಗಿದೆ. ಉದ್ಯಮ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ ಉಲ್ಲಾಸ್ ಕಾಮತ್ ಅವರನ್ನೂ ಮಂಡಳಿಯಲ್ಲಿ ಸಲಹೆಗಾರರಾಗಿ ಸೆಳೆದುಕೊಂಡಿದೆ. ಜತೆಗೆ 25 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ 1.2 ಲಕ್ಷ ಚದರ ಅಡಿ ಉತ್ಪಾದನಾ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ಇಂದಿರಾ ಫುಡ್ಸ್‍ನ ಅಧ್ಯಕ್ಷೆ ಇಂದಿರಾ ಹೇಳಿದ್ದಾರೆ.
ನಾವು ಕಳೆದ ಹಣಕಾಸು ವರ್ಷದಲ್ಲಿ 45 ಕೋಟಿ ರೂಪಾಯಿಗಳ ಮಾರಾಟ ದಾಖಲಿಸಿದ್ದು, ಇಂದಿರಾ ಫುಡ್ಸ್ 250 ಜನರಿಗೆ ಉದ್ಯೋಗ ನೀಡಿದೆ ಮತ್ತು ತನ್ನ ವಿಸ್ತರಣಾ ಯೋಜನೆಗಳ ಭಾಗವಾಗಿ ಮುಂದಿನ 1 ವರ್ಷದಲ್ಲಿ ಇನ್ನೂ 100 ಜನರನ್ನು ಸೇರಿಸುವ ಗುರಿ ಹಾಕಿಕೊಂಡಿದೆ ಎಂದು ನಿರ್ದೇಶಕ ವಿಜಯ್ ಸಿ ಹೇಳಿದ್ದಾರೆ.
ಪ್ರಸ್ತುತ, ಇಂದಿರಾ ಫುಡ್ ಪ್ರೈವೇಟ್ ಲಿಮಿಟೆಡ್ ನಾಲ್ಕು ಉತ್ಪನ್ನ ವಿಭಾಗಗಳಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತಿದೆ: ರಾಗಿ ಉತ್ಪನ್ನಗಳು, ಹುಣಸೆ ಸಾಂದ್ರಣ ಮತ್ತು ಟೊಮೆಟೊ ಪೇಸ್ಟ್‍ಗಳು, ಇನ್‍ಸ್ಟಂಟ್ ರಸಂ ಪೇಸ್ಟ್‍ಗಳು, ಕೆಚಪ್, ಜಾಮ್ ಮತ್ತು ಉಪ್ಪಿನಕಾಯಿ, ಅಮೆರಿಕ, ಬ್ರಿಟನ್, ನೆದಲ್ಯಾರ್ಂಡ್ಸ್, ಜರ್ಮನಿ, ನ್ಯೂಜಿಲೆಂಡ್ ಮತ್ತು ಮಧ್ಯಪ್ರಾಚ್ಯದಂತಹ ದೇಶಗಳಿಗೆ ಬೃಹತ್ ಉತ್ಪನ್ನಗಳು ಮತ್ತು ಸ್ವಂತ-ಬ್ರ್ಯಾಂಡ್ ಉತ್ಪನ್ನಗಳನ್ನು ರಫ್ತು ಮಾಡುತ್ತದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ