ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆ

Upayuktha
0



ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ನವಂಬರ್ 4, 2023ರಂದು ಮುಕ್ಕ ಕ್ಯಾಂಪಸ್ನಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ಕೇವಲ ಕಲಿಯುವಿಕೆಯಲ್ಲಿ ಯಾವುದನ್ನು ಮರೆಯಬಾರದು, ಶಿಕ್ಷಣದೊಂದಿಗೆ ಶೈಕ್ಷಣಿಕ ಬೆಳವಣಿಗೆಯಿಂದ ರಾಷ್ಟ್ರದ ಬೆಳವಣಿಗೆಗೆ ನಾವು  ನೆರವಾಗಬೇಕು. ಕೃಷಿ ಸಂಸ್ಕೃತಿ ಭದ್ರವಾಗಿದ್ದರೆ ಋಷಿ ಸಂಸ್ಕೃತಿ ಉಳಿಯುತ್ತದೆ. ಸ್ವಂತ ಉದ್ಯಮದೊಂದಿಗೆ ರಾಷ್ಟ್ರದ ಸಂಪತ್ತಾಗಿ ಇದೆ ನಾವು ನಮ್ಮ ರಾಜ್ಯಕ್ಕೆ ರಾಷ್ಟ್ರಕ್ಕೆ ನೀಡುವ ಸೇವೆ ಎಂದರು.



 ಅತಿಥಿ ಅಗರಿ ಎಂಟರ್ಪ್ರೈಸಸ್ ಮಾಲೀಕರಾದಂತಹ ಶ್ರೀ ಅಗರಿ ರಾಘವೇಂದ್ರ ರಾವ್ ಮಾತನಾಡಿ, ಯಕ್ಷಗಾನದ ಮೂಲಕ ಸ್ವಚ್ಛ ಕನ್ನಡದಲ್ಲಿ ಭಾಷೆಯನ್ನು ಬೆಳಗುವ ಕಾರ್ಯ ನಡೆಯುತ್ತಿದೆ. ಕನ್ನಡ ಕ್ರಾಂತಿಯ ಬೆಳಕನ್ನು ನಾನು ಇಂದು ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಕಂಡಿದ್ದೇನೆ ಎಂದರು.



 ಎಸ್ ಯುಐಈಟಿ ಡೀನ್ ಡಾ  ಥಾಮಸ್ ಪಿಂಟೋ,  ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ. ಶ್ರೀನಾಥ್ ರಾವ್ ಕೆ. ಸ್ವಾಗತಿಸಿ, ಪ್ರೊಫೆಸರ್ ಶ್ವೇತಾ ಪೈ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top