ಗ್ರಾಮೀಣ ಸೊಗಡಿನ ಕಥೆಗಳಿಂದ ಸಿನಿಮಾ ಯಶಸ್ಸು: ಚೇತನ್ ಮುಂಡಾಡಿ

Upayuktha
0

                 ಎಸ್.ಡಿ.ಎಂ ಬಿವೋಕ್ ಫಿಲ್ಮ್ ಸೊಸೈಟಿಗೆ ಚಾಲನೆ




ಉಜಿರೆ: ಗ್ರಾಮೀಣ ಸೊಗಡಿನ ಕಥಾವಸ್ತುಗಳ ಮೂಲಕ ಹೊಸ ಕಾಲದಲ್ಲಿ ಸಿನಿಮಾರಂಗದಲ್ಲಿ ಯಶಸ್ವಿ ಹೆಜ್ಜೆಗಳನ್ನಿರಿಸಬಹುದು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಿತ್ರ ನಿರ್ದೇಶಕರಾದ ಚೇತನ್ ಮುಂಡಾಡಿ ಅಭಿಪ್ರಾಯಪಟ್ಟರು. 




 ಅವರು  ಉಜಿರೆಯ ಎಸ್. ಡಿ. ಎಂ ಕಾಲೇಜಿನ ಬಿವೋಕ್ ವಿಭಾಗದ ಟೆಸ್ಸೆರಾಕ್ಟ್ ಫಿಲ್ಮ್ ಸೊಸೈಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು.



ಒಂದು ಸಿನಿಮಾ ತನ್ನ ಕಥೆ, ಪಾತ್ರದ ಮೂಲಕ ನಮ್ಮೊಳಗೆ ಅಚ್ಚಳಿಯದೇ ಉಳಿದುಬಿಡುತ್ತದೆ. ಈ ದೃಷ್ಟಿಯಿಂದ ನೋಡುವಂಥ ಸಿನಿಮಾ ಮತ್ತು ಕಾಡುವಂಥ ಸಿನಿಮಾ ಎಂದು ಎರಡು ಬಗೆಗಳಲ್ಲಿ ವಿಂಗಡಿಸಬಹುದು. ಕಾಡುವಂಥ ಸಿನಿಮಾಗಳಿಗೆ ಪೂರಕವಾದ ಎಳೆಗಳು ಗ್ರಾಮೀಣ ಸೊಗಡಿನಲ್ಲಿ ಅಡಗಿರುತ್ತವೆ. ಕಥೆಗಳಿಗೆ ಹಲವಾರು ಆಯಾಮಗಳಿರುತ್ತವೆ. ಇಂಥ ಕಥೆಗಳನ್ನು ಹೊಳೆಸಿಕೊಳ್ಳಲು ಜನರ ನಾಡಿ ಮಿಡಿತ ಅರಿತಿರಬೇಕು. ಹಾಗಾದಾಗ ಮಾತ್ರ ಭಿನ್ನ ಕಥೆಗಳೊಂದಿಗಿನ ಸಿನಿಮಾ ನಿರೂಪಣೆ ಸಾಧ್ಯ. ಈ ಬಗೆಯ ಸೂಕ್ಷ್ಮತೆಯೊಂದಿಗೆ ಗುರುತಿಸಿಕೊಂಡಾಗ ಲಭ್ಯವಾಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಸ್ಫೂರ್ತಿದಾಯಕ ಅಂಶಗಳನ್ನು ಜನರಿಗೆ ದಾಟಿಸಬಹುದು ಎಂದರು.   




ಎಸ್. ಡಿ. ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೇವಲ ಕನ್ನಡ ಮಾತ್ರವಲ್ಲದೇ ದೇಶ ವಿದೇಶಗಳ ಉಳಿದ ಭಾಷೆಗಳ ಉತ್ಕøಷ್ಟ ಸಿನಿಮಾಗಳನ್ನೂ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅವುಗಳ ಕುರಿತು ವಸ್ತುನಿಷ್ಠವಾಗಿ ವಿಮರ್ಶೆ ನಡೆಸಬೇಕು ಎಂದು ಸಲಹೆ ನೀಡಿದರು. 




ಕಾರ್ಯಕ್ರಮದಲ್ಲಿ ಬಿವೋಕ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಡೆ ಹಾಗೂ ಬಿವೋಕ್ ಸಂಯೋಜಕ ಸುವೀರ್ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಥಮ ವರ್ಷದ ವಿದ್ಯಾರ್ಥಿ ಅಕ್ಷಯ್ ನಿರೂಪಿಸಿದರು.  ಸಹಾಯಕ ಪ್ರಾಧ್ಯಾಪಕ ಇಂದುಧರ್ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top