ಡಾ| ವೈ. ಕೆ ಕೇಶವಭಟ್ ಪ್ರಾತಃಸ್ಮರಣೀಯರು: ಕೀರಿಕ್ಕಾಡು ಮಹಾಲಿಂಗ ಪ್ರಕಾಶ್

Upayuktha
1 minute read
0

 

ಏತಡ್ಕ: ಡಾ| ವೈ ಕೆ ಕೇಶವ ಭಟ್ ಪ್ರಾತಃಸ್ಮರಣೀಯ, ನಿಸ್ವಾರ್ಥ ಸೇವಕ, ಸಮಾಜ ಸುಧಾರಕ, ಬಡವರ ಬಂಧು, ರಾಜಕೀಯ ಧುರೀಣ, ಹಾಗೂ ಧಾರ್ಮಿಕ ಮುಂದಾಳು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕೀರಿಕ್ಕಾಡು ಮಹಾಲಿಂಗ ಪ್ರಕಾಶ್ ನುಡಿದರು.


ಅವರು ಏತಡ್ಕ ಗ್ರಾಮಸೇವಾ ಸಂಘ ಗ್ರಂಥಾಲಯ ಏತಡ್ಕದ ಆಶ್ರಯದಲ್ಲಿ ಸಮಾಜಮಂದಿರದಲ್ಲಿ ನ.22 ಬುಧವಾರ ನಡೆದ ಡಾ. ವೈ.ಕೆ ಕೇಶವ ಭಟ್ ಸಂಸ್ಮರಣಾ ಕಾರ್ಯಕ್ರಮ ದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.


ಸಭೆಯ ಅಧ್ಯಕ್ಷ ವೈ ಕೆ ಗಣಪತಿ ಭಟ್ ಏತಡ್ಕ ಮಾತನಾಡಿ ಡಾ ವೈ ಕೆ ಕೇಶವ ಭಟ್ ಯುವಕರನ್ನು ಸಮಾಜಮುಖೀ ಕಾರ್ಯಕ್ರಮಗಳಿಗೆ ತೊಡಗಿಸಿಕೊಂಡ ಯುವಜನ ಮುಂದಾಳು ಎಂದು ಅಭಿಪ್ರಾಯಪಟ್ಟರು.


ಪ್ರಸಿದ್ಧ ಹವ್ಯಾಸಿ ಪತ್ರಕರ್ತ ಹಾಗೂ ಛಾಯಾಗ್ರಾಹಕ ಚಂದ್ರಶೇಖರ ಏತಡ್ಕ ಮಾತನಾಡಿ, ದಿ| ಡಾಕ್ಟರ್ ಅವರು ಒಬ್ಬ ಮರೆಯಲಾರದ ನಿಸ್ವಾರ್ಥ ಸೇವಕರು ಎಂದು ಹೇಳಿದರು. ಏತಡ್ಕ ಎಂಬ ಊರಿಗೆ ಡಾ ವೈ ಕೆ ಕೇಶವಭಟ್ ಅವರ ಹೆಸರು ಪರ್ಯಾಯ ಪದವಾಗಿದೆ ಎಂದು ಡಾ ವೇಣುಗೋಪಾಲ ಕಳೆಯತ್ತೋಡಿ ಶ್ಲಾಘಿಸಿದರು. ಡಾಕ್ಟರರ ಓರ್ವ ಒಡನಾಡಿ ವೈ ವಿ ಸುಬ್ರಹ್ಮಣ್ಯ ಭಟ್ ಮಾತನಾಡಿ ದಿ| ಡಾಕ್ಟರರು ಒಬ್ಬ ಉತ್ತಮ ಮಾರ್ಗನಿರ್ದೇಶಕರು ಎಂದರು.


ಏತಡ್ಕ ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಡಾಕ್ಟರರು ಓರ್ವ ಬಹುಮುಖ ಪ್ರತಿಭೆ ಎಂದು ಶ್ಲಾಘಿಸಿದರು. ಪ್ರಸಿದ್ಧ ಕವಿ ನರಸಿಂಹ ಭಟ್ ಕಟ್ಟದಮೂಲೆ ಡಾಕ್ಟರರ ಕುರಿತು ಸ್ವರಚಿತ ಕವನ ವಾಚಿಸಿದರು. ಮಾಲತಿ ವೈ ಜಿ ಭಟ್ ಏತಡ್ಕ ಭಾವಗೀತೆ ಹಾಡಿದರು. ವೈ ವಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಗ್ರಂಥಾಲಯದ ಕಾರ್ಯದರ್ಶಿ ಗಣರಾಜ.ಕೆ ಏತಡ್ಕ ವಂದಿಸಿದರು. ನೆರೆದವರೆಲ್ಲರೂ ಡಾ| ವೈ ಕೆ ಕೇಶವಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top