ಮಂಗಳೂರು: ಮಂಗಳೂರಿನ ದೇರೆಬೈಲ್ ಕೊಂಚಾಡಿಯಲ್ಲಿರುವ ಡಾ. ಯು. ಕುಮಾರಸ್ವಾಮಿ ಅವರಿಗೆ ಈ ವರ್ಷದ ಪ್ರತಿಷ್ಠಿತ ಭಾರತೀಯ ವೈದ್ಯ ಸಂಘ (ಐಎಂಎ) ನೀಡುವ ಕರ್ನಾಟಕದ ಅತ್ಯುತ್ತಮ ಕುಟುಂಬ ವೈದ್ಯ ಪ್ರಶಸ್ತಿ (ಬೆಸ್ಟ್ ಫ್ಯಾಮಿಲಿ ಫಿಸಿಷಿಯನ್) ದೊರೆತಿದೆ.
ಕಳೆದ 43 ವರ್ಷಗಳಿಂದ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಡಾ. ಯು. ಕುಮಾರಸ್ವಾಮಿ ಅವರು ಈ ಪರಿಸರದಲ್ಲಿ ಅತ್ಯಂತ ಜನಪ್ರಿಯ ಕುಟುಂಬ ವೈದ್ಯರಾಗಿದ್ದಾರೆ. ಕಾಸರಗೋಡು ಮೂಲದ ಹೆಸರಾಂತ ಉಪ್ಪಂಗಳ ಮನೆತನದವರಾದ ಅವರು ದಿ. ಪ್ರಾಧ್ಯಾಪಕ ವಿದ್ವಾನ್ ಉಪ್ಪಂಗಳ ಮಹಾಲಿಂಗ ಭಟ್ಟರ ಪುತ್ರರಾಗಿದ್ದಾರೆ.
ಮಂಗಳೂರಿನ ಐಎಂಎ ಘಟಕ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಾ. ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ