ಬೆಳಕಿನ ಹಬ್ಬ ದೀಪಾವಳಿ

Upayuktha
0



ಬ್ಬಗಳೆಂದರೆ ಮೈ ಮನ ಸ್ವಚ್ಚಗೊಳಿಸುವುದು ಮತ್ತು ದಿನನಿತ್ಯವಲ್ಲದ ಹೊಸದೊಂದು ದಿನದ ಆಚರಣೆಯಾಗಿದೆ. ದೀಪವೆಂಬ ಹಣತೆಯ ಸಾಲುಗಳಿಂದ ದೀಪಗಳಿಂದ ದೀಪಗಳನ್ನು ಹಚ್ಚಿ ಅದರಿಂದ ಸೂಸುವ ಬೆಳಕಿನ ಕಿರಣಗಳಿಂದ ಜಗತ್ತಿನಲ್ಲಿರುವ ಋಣಾತ್ಮಕತೆಯನ್ನು ಹೋಗಲಾಡಿಸಿ ಧನಾತ್ಮಕತೆಯನ್ನು ಮೂಡಿಸುವ ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುವ ಹಬ್ಬವಾಗಿದೆ ಬೆಳಕಿನ ಹಬ್ಬ ದೀಪವಾಳಿ. ಹಬ್ಬದ ದಿನದಂದು ಅಷ್ಟೈಶ್ವರ್ಯ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ, ಈ ಹಬ್ಬವು ಅಜ್ಞಾನವನ್ನು ಕಳೆದು ಜ್ಞಾನ, ಕೆಡುಕಿನ ಮೇಲೆ ಒಳ್ಳೆಯ ಮತ್ತು ಹತಾಶೆಯ ಮೇಲೆ ಭರವಸೆಯ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ.




ದೀಪಾವಳಿ ಹಬ್ಬವನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ ಏಕೆಂದರೆ ಈ ದಿನ ಕ್ರೂರಿಯಾದ ರಾಜ ನರಕಾಸುರನನ್ನು ಕೃಷ್ಣನು ವಧೆ ಮಾಡಿದ ದಿನ ಮತ್ತು ಈ ಹಬ್ಬಗಳ ಸಂದರ್ಭಗಳಲ್ಲಿ ಗೋಮಾತೆಯನ್ನು ಪೂಜಿಸುವುದು ವಿಶೇಷತೆಯಾಗಿದೆ.



ಗೋಪೂಜೆ:

ಹಿಂದು ಧರ್ಮದವರಿಗೆ ಗೋಪೂಜೆಯು ಅತ್ಯಂತ ಪವಿತ್ರ ಹಾಗೂ ಮಹತ್ತರವಾಗಿದೆ, ಏಕೆಂದರೆ ಪ್ರತಿಯೊಂದು ವಿಶೇಷ ಕಾರ್ಯಕ್ರಮಗಳು ನಡೆಯಬೇಕೆಂದರೆ ಗೋವಿನ ಆರಾಧನೆಯನ್ನು ಮಾಡಲಾಗುತ್ತದೆ. ಹಬ್ಬದ ಮೂರನೇ ದಿವಸ, ಮೂರುಕೋಟಿ ದೇವಾನುದೇವತೆಗಳನ್ನು ಹೊಂದಿರುವ ಗೋಮಾತೆಯನ್ನು ಅಲಂಕರಿಸಿ, ವಿಶೇಷ ತಿನಿಸುಗಳನ್ನು ತಿನ್ನಿಸಿ ಪೂಜೆ ಮಾಡಲಾಗುತ್ತದೆ.ಪ್ರತಿವರ್ಷವೂ ಕಾರ್ತಿಕ ಮಾಸದ ತಿಂಗಳಿನ ದೀಪಾವಳಿಯಲ್ಲಿ ಗೋಪೂಜೆಯನ್ನು ಆಚರಿಸಲಾಗುತ್ತದೆ.



-ಶಿಲ್ಪಾ ಜಯಾನಂದ್

ಪ್ರಥಮ ಜೆ.ಎಂ.ಸಿ ವಿಭಾಗ

ವಿವೇಕಾನಂದ(ಸ್ವಾಯತ)ಕಾಲೇಜ್ ಪುತ್ತೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top