ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ಮಿಶ್ರತಳಿ ಹಸುಗಳ ವಿತರಣೆ

Upayuktha
0


ಮಂಗಳೂರು: 2023-24ನೇ ಸಾಲಿನ “ಹಾಲು ಉತ್ಪಾದಕರಿಗೆ ಉತ್ತೇಜನ” ಕಾರ್ಯಕ್ರಮದ ಉಳಿಕೆ ಅನುದಾನದಲ್ಲಿ ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳಿಗೆ ಒಂದು ಮಿಶ್ರತಳಿ ಹಸುವನ್ನು ವಿತರಿಸುವ ಕಾರ್ಯಕ್ರಮವಿರುತ್ತದೆ.


ಘಟಕ ವೆಚ್ಚ ರೂ. 65000 ಗಳಾಗಿದ್ದು, ಶೇಕಡಾ 90 ಸಹಾಯಧನದ ಸೌಲಭ್ಯವಿರುತ್ತದೆ. ಆಸಕ್ತರು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿ, ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸಬಹುದು.


ಹೆಚ್ಚಿನ ಮಾಹಿತಿಗೆ ಬಂಟ್ವಾಳ ತಾಲೂಕು 9481445365, ಬೆಳ್ತಂಗಡಿ ತಾಲೂಕು 9448533922, ಮಂಗಳೂರು ತಾಲೂಕು 9243306956, ಮುಲ್ಕಿ ತಾಲೂಕು 8971024282, ಉಳ್ಳಾಲ ತಾಲೂಕು 9019198507, ಮೂಡಬಿದ್ರೆ ತಾಲೂಕು 7204271943, ಪುತ್ತೂರು ತಾಲೂಕು 9483920208, ಕಡಬ ತಾಲೂಕು 9483922594 ಹಾಗೂ ಸುಳ್ಯ ತಾಲೂಕು 9844995078 ಅನ್ನು ಸಂಪರ್ಕಿಸುವಂತೆ ಅಥವಾ ಗ್ರಾಮ ಪಂಚಾಯತ ಮಟ್ಟದಲ್ಲಿರುವ ಪಶುಸಖಿಯರನ್ನು ಸಂಪರ್ಕಿಸಬಹುದು ಎಂದುಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top