ಹಾಸನ: ಇಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಮನೆ ಮನೆ ಕವಿಗೋಷ್ಠಿಯ 312ನೇ ತಿಂಗಳ ಸಾಹಿತ್ಯ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಸಮಾಜ ಸೇವಕರು ಜೆ.ಓ.ಮಹಾಂತಪ್ಪರವರ ಪ್ರಾಯೋಜನೆಯಲ್ಲಿ ಡಿ. 03 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ವಿಶ್ವ ಮಾನವ ಬಂಧುತ್ವ ವೇದಿಕೆ ಸಭಾಂಗಣ, ಖಾದಿ ಭಂಡಾರ ಬಿಲ್ಡಿಂಗ್, ಅರಳೇಪೇಟೆ, ಸಹ್ಯಾದ್ರಿ ಥಿಯೇಟರ್ ಪಕ್ಕದ ಬಸವೇಶ್ವರ ಕಲ್ಯಾಣ ಮಂಟಪ ರಸ್ತೆ ಇಲ್ಲಿ ನಡೆಯಲಿದೆ.
ಡಾ. ಭೇರ್ಯ ರಾಮಕುಮಾರ್ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಮೈಸೂರು ಇವರಿಂದ ನಾ ಕಂಡಂತೆ ಕುವೆಂಪು ಉಪನ್ಯಾಸ, ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕರಿಂದ ಕುವೆಂಪು ಭಾವಗೀತೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖೈಯಲ್ಲಿ ಸಾಹಿತ್ಯಾಸಕ್ತರು, ಕವಿಗಳು ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ