ಗಡಿಪಾರು ಅಸ್ತ್ರದಿಂದ ಹಿಂದೂ ಸಂಘಟನೆ ಬಲ ಕುಗ್ಗಿಸಲು ಕಾಂಗ್ರೆಸ್ ಯತ್ನ: ಡಾ.ಭರತ್ ಶೆಟ್ಟಿ ವೈ ಆರೋಪ

Upayuktha
0



ಸುರತ್ಕಲ್: ಗಡಿಪಾರು ಆದೇಶ, ರೌಡಿಶೀಟರ್ ಕಾನೂನು ಆಸ್ತ್ರ ಬಳಸಿ ಪ್ರಬಲವಾಗಿ ಬೆಳೆಯುತ್ತಿರುವ ಹಿಂದೂ ಸಂಘಟನೆಯ ಬಲ ಕುಗ್ಗಿಸಲು ಕಾಂಗ್ರೆಸ್ ಪರೋಕ್ಷವಾಗಿ ಯತ್ನಿಸುತ್ತಿದ್ದು, ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ವಿಧಿಸಿರುವ ಗಡಿಪಾರು ಆದೇಶ ಇದರ ವಿರುದ್ದ ಪ್ರಬಲ  ಪ್ರತಿ ಹೋರಾಟ ಮಾಡಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.


ಹಿಂದೂ ಕುಟುಂಬಗಳಿಗೆ ಅದರಲ್ಲೂ ಅಪ್ರಾಪ್ತ ಹಿಂದೂ ಯುವತಿಯನ್ನು ಅನ್ಯಮತೀಯ ಪುಸಲಾಯಿಸಿ ಜೀವನ ಹಾಳು ಮಾಡುವುದನ್ನು ತಡೆದ ನಾಲ್ವರು ಹಿಂದೂ ಯವ ಕಾರ್ಯಕರ್ತರ ಮೇಲೆ ಅಪಹರಣ ಕೇಸು ದಾಖಲು ಮಾಡಿ ಪೊಲೀಸ್ ಇಲಾಖೆ ಮೂಲಕ ದಬ್ಬಾಳಿಕೆ ಮಾಡುತ್ತಿದೆ. ಹಿಂದೂ ಯುವತಿಯರ ನೆರವಿಗೆ ಬರುವ ಹಿಂದೂ ಕಾರ್ಯಕರ್ತರನ್ನು ಕ್ರಿಮಿನಲ್ ಗಳಂತೆ ಕಾಂಗ್ರೆಸ್ ಸರಕಾರ ನೋಡುತ್ತಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

 

ಹಿಂದೂ ಮುಖಂಡರು, ಕಾರ್ಯಕರ್ತರು ಕಾರಣವಿಲ್ಲದೆ ಯಾರದೇ ತಂಟೆಗೆ ಹೋಗುವುದಿಲ್ಲ. ಆದರೆ ಹಿಂದೂ ಸಮಾಜದ ಅಸ್ಮಿತೆಗೆ ಧಕ್ಕೆ ಬಂದಾಗ ಹೋರಾಟ ಮಾಡುತ್ತಾರೆ. ಪೊಲೀಸ್ ಠಾಣೆಯಲ್ಲಿ ಈ ಮೂಲಕ ದಾಖಲಾದ ಸಣ್ಣಪುಟ್ಟ ಕೇಸ್ ಆಧಾರವಾಗಿಸಿ ಗಡಿಪಾರು ಆದೇಶ ಮಾಡುವುದನ್ನು ನೋಡಿದರೆ ಹಿಂದೂ ಸಂಘಟನೆಗಳ ಬಗ್ಗೆ ಸರಕಾರಕ್ಕೆ ಭೀತಿಯಿರುವಂತೆ ಕಾಣುತ್ತದೆ. ಪುತ್ತೂರಿನ ಕಾರ್ಯಕರ್ತರ ಗಡಿಪಾರು ಆದೇಶ ಹಿಂಪಡೆಯಬೇಕು ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top