ತೆಂಕನಿಡಿಯೂರು ಕಾಲೇಜಿನಲ್ಲಿ ಸಂಶೋಧನಾತ್ಮಕ ಲೇಖನಗಳ ಪುಸ್ತಕ ಬಿಡುಗಡೆ

Upayuktha
0



ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಅಧ್ಯಾಪಕರು 2023-24ನೇ ಸಾಲಿನ ಸಂಶೋಧನಾತ್ಮಕ ಲೇಖನಗಳ ಗ್ರಂಥವನ್ನು ಡಾ. ಗಣನಾಥ ಶೆಟ್ಟಿ ಎಕ್ಕಾರು ನಿವೃತ್ತ ಪ್ರಾಂಶುಪಾಲರು ಹಾಗೂ ಗೌರವ ಕಾರ್ಯದರ್ಶಿಗಳು ರೆಡ್‍ಕ್ರಾಸ್ ಘಟಕ, ಉಡುಪಿ ಇವರು ಬಿಡುಗಡೆಗೊಳಿಸಿದರು.  



ಸ್ನಾತಕೋತ್ತರ ಅಧ್ಯಯನದಲ್ಲಿ ಸಂಶೋಧನೆಯ ಮಹತ್ವವನ್ನು ಮನಗಾಣಿಸಲು ಈ ಗ್ರಂಥ ಉಪಯುಕ್ತವೆಂದು ಅಭಿಪ್ರಾಯಪಟ್ಟರು.  ಡಾ. ದುಗ್ಗಪ್ಪ ಕಜೆಕಾರ್ ಅವರು ಈ ಸಾಲಿನ ಗ್ರಂಥಕ್ಕೆ ಪ್ರೋಬ್ಸ್ ಎಂದು ಹೆಸರು ನೀಡಿದ್ದು ಪ್ರತಿ ವರ್ಷದಂತೆ ಕಾಲೇಜಿನ ಅಧ್ಯಾಪಕರುಗಳು ಪಾಠ ಪ್ರವಚನದೊಂದಿಗೆ ಸಂಶೋಧನೆಯಲ್ಲೂ ತೊಡಗಿಕೊಂಡಿರುವುದನ್ನು ವಿವರಿಸಿದರು.  



ಡಾ. ಜಗದೀಶ ಶೆಟ್ಟಿ ನಿವೃತ್ತ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿಗಳು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಎಂ.ಜಿ.ಎಂ. ಕಾಲೇಜು, ಉಡುಪಿ ಶುಭ ಹಾರೈಸಿದರು. ಅಧ್ಯಕ್ಷತೆಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಇವರು ಸಂಬಂಧಪಟ್ಟ ಎಲ್ಲರನ್ನು ಅಭಿನಂದಿಸಿದರು.  ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರತ್ನಮಾಲಾ ಕಾರ್ಯಕ್ರಮ ನಿರೂಪಿಸಿದರು.  



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top