ದೇಹದ ನಿಲುವು ಸರಿಪಡಿಸಲು ಯೋಗಾಸನ ಸಹಕಾರಿ - ಸ್ವಾಮಿ ರಘುರಾಮನಂದಜೀ

Upayuktha
0


ಮಂಗಳೂರು:
ನಮ್ಮ ನಿತ್ಯ ಜೀವನದಲ್ಲಿ ನಿಲ್ಲುವ, ಕೂತುಕೊಳ್ಳುವ (ವಿಶೇಷವಾಗಿ ಕಛೇರಿಯಲ್ಲಿ ಕೆಲಸ ನಿರ್ವಹಿಸುವವರು) ಭಂಗಿಗಳು ಸಮರ್ಪಕವಾಗಿರಬೇಕು. ನಮ್ಮ ಭಂಗಿಗಳ ಸಮರ್ಪಕತೆಗೆ ಯೋಗಾಸಗಳು ತುಂಬಾ ಸಹಕಾರಿಯಾಗುತ್ತದೆ. ಅಲ್ಲದೆ ದೈಹಿಕ ಆರೋಗ್ಯ ಚಿತ್ತ ಶಾಂತಿ, ಹಗೂ ಆಧ್ಯಾತ್ಮಿಕ ಸಾಧನೆಗೆ ಯೋಗ ಬಹಳಷ್ಟು ಸಹಕಾರಿಯಾಗುತ್ತದೆ ಎಂದು ಸ್ವಾಮಿ ರಘುರಾಮನಂದಜೀಯವರು ಹೇಳಿದರು. 


ಅವರು ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಅಕ್ಟೋಬರ ತಿಂಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.  ಕಾರ್ಯಕ್ರಮ ಅತಿಥಿಯಾಗಿ ಬಂದ ಡಾ. ಮಹೇಶ್ ಉಪನ್ಯಾಸಕರು ಇವರು ಶಿಬಿರಕ್ಕೆ ಶುಭಹಾರೈಸಿದರು. ಯೋಗ ಶಿಬಿರ ನಡೆಸಿಕೊಡುವ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು, ಯೋಗದ ಮಹತ್ವ ನಿಯಮಗಳನ್ನು ತಿಳಿಸಿದರು. ಯೋಗವು ಮೂಲತಃ ಅನುಶಾಸನ ಅದರಲ್ಲಿ ಮುಖ್ಯವಾಗಿ ಪರಿಷ್ಠಿತ ವಿಜ್ಞಾನ ಆಧಾರಿತವಾಗಿದೆ. ಇದು ಆರೋಗ್ಯಕರ ಜೀವನ ಕಲೆ ಮತ್ತು ವಿಜ್ಞಾನ. ಯೋಗಾಭ್ಯಾಸವು ವಿಶ್ರಾಂತಿ ನೀಡುತ್ತದೆ ಮತ್ತು ಭಾವನಾತ್ಮಕ ಮತ್ತು ಮಾನಸಿಕ ಒತ್ತಡದಿಂದ ನಿಮಗೆ ಪರಿಹಾರ ನೀಡುತ್ತದೆ ಎಂದು ತಿಳಿಸಿದರು.



ಪ್ರತಿ ತಿಂಗಳು ಶ್ರೀ ರಾಮಕೃಷ್ಣ ಮಠದಲ್ಲಿ ಯೋಗ ಶಿಬಿರ ನಡೆಯುತ್ತದೆ. ಆಸಕ್ತರು ಮಠದ ಕಾರ್ಯಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ. ಶಿಬಿರದಲ್ಲಿ ಪ್ರಾರ್ಥನೆ, ಧ್ಯಾನ, ಅಷ್ಟಾಂಗ ಯೋಗದ ಮಾಹಿತಿ, ಆಸನಗಳು, ಪ್ರಾಣಾಯಾಮ ಮಂತ್ರ ಹಾಗೂ ಯಾವ ಕಾಯಿಲೆಗೆ ಯಾವ ಯೋಗ, ಮಂತ್ರ ಮುದ್ರೆಗಳು ತಿಳಿಸಿಕೊಡಲಾಗುವುದು. ಯೋಗ ಚಕ್ರದ ಮಾಹಿತಿ, ವರ್ಣ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಶ್ರೀ ದೇಲಂಪಾಡಿಯವರು ಶಿಬಿರದ ಮಾಹಿತಿ ತಿಳಿಸಿದರು. ಆಸಕ್ತರು ಸಂಜೆ 5.00 ರಿಂದ ನಡೆಸುವ ರಾಮಕೃಷ್ಣ ಮಠದ ಯೋಗ ಹಾಲ್‌ನಲ್ಲಿ ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಬಹುದು. ಶಿಬಿರದಲ್ಲಿ ಸುಮಾ, ಚಂದ್ರಹಾಸ್ ಸಹಕರಿಸುತ್ತಾರೆ. ಕೊನೆಗೆ ಶ್ರೀ ದೇಲಂಪಾಡಿಯವರು ಧನ್ಯವಾದ ಸಮರ್ಪಣೆಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top