ಉಡುಪಿ ನಗರಸಭೆ: ಕುಡಿಯುವ ನೀರಿನ ದರ ಪರಿಷ್ಕರಣೆ

Upayuktha
0


ಉಡುಪಿ: ಉಡುಪಿ ನಗರಸಭೆಯ ವತಿಯಿಂದ ಕುಡಿಯುವ ನೀರಿನ ಬಳಕೆಯ ಶುಲ್ಕವನ್ನು ಪರಿಷ್ಕರಿಸಿ, ದರ ಏರಿಕೆ ಮಾಡಲಾಗಿದೆ. ಸರಕಾರದ ಆದೇಶದಂತೆ ಕುಡಿಯುವ ನೀರಿನ ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿದ್ದು, ಕಳೆದ 12 ವರ್ಷಗಳಲ್ಲಿ ದರವನ್ನು ಪರಿಷ್ಕರಿಸಲಾಗಿರುವುದಿಲ್ಲ. ಪ್ರಸ್ತುತ ವಿದ್ಯುತ್, ಇತರೇ ನಿರ್ವಹಣಾ ವೆಚ್ಚಗಳು ಅಧಿಕವಾಗಿರುವುದರಿಂದ ದರವನ್ನು ಪರಿಷ್ಕರಿಸುವುದು ಅನಿವಾರ್ಯವಾಗಿದ್ದು, ನವೆಂಬರ್ 1 ರಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ಬಳಕೆ ಶುಲ್ಕವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗುವುದು.


ಒಂದು ಸಾವಿರ ಲೀಟರ್ ನೀರು: ಗೃಹ ಬಳಕೆಗೆ 8 ಸಾವಿರ ಲೀ. ವರೆಗೆ 11 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 15 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 20 ರೂ. ಹಾಗೂ 20,000 ಲೀ. ಗಿಂತ ಅಧಿಕ ಬಳಕೆಯಾದಲ್ಲಿ 30 ರೂ. ವಿಧಿಸಲಾಗುವುದು.


ಗೃಹೇತರ ಬಳಕೆಗೆ 8 ಸಾವಿರ ಲೀ. ವರೆಗೆ 25 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 35 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 50 ರೂ., ವಿಧಿಸಲಾಗುವುದು.


ವಾಣಿಜ್ಯ/ ಕೈಗಾರಿಕೆಗೆ 8 ಸಾವಿರ ಲೀ. ವರೆಗೆ 50 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 60 ರೂ. ಹಾಗೂ 15,000 ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 70 ರೂ. ವಿಧಿಸಲಾಗುವುದು.


ಪ್ರತೀ ಸಂಪರ್ಕಕ್ಕೆ ಗೃಹ ಬಳಕೆಗೆ 88 ರೂ. ಗೃಹೇತರ ಸಂಪರ್ಕಕ್ಕೆ 200 ರೂ. ಹಾಗೂ ವಾಣಿಜ್ಯ/ ಕೈಗಾರಿಕೆಗಳ ಸಂಪರ್ಕಕ್ಕೆ 400 ರೂ. ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top