ಅಗಲಿಕೆಯು ತರವಲ್ಲ, ಕೇಳು
ಪ್ರೀತಿಯಿಂದ ಇರಬೇಕಲ್ಲ, ಬಾಳು
ಜೀವನದಲ್ಲಿ ಏನೂ ಇಲ್ಲ
ಪ್ರೇಮ-ಸ್ನೇಹ ಇದ್ದರೆ ಸಾಕಲ್ಲ...
ಓ ಪ್ರೇಯಸಿ ಪ್ರೇಮಗೀತೆ ನಿನಗಾಗಿ
ಮೋಸ ಮಾಡದಿರು ನನಗೆ
ಬಾಳಬೇಕಿದೆ ನಾ ಮುಂದೆ ನಿನಗಾಗಿ
ಪ್ರೋತ್ಸಾಹ ಬೇಕಿದೆ ಶಾಶ್ವತವಾಗಿ...
ಬೆಟ್ಟದಷ್ಟು ಕಷ್ಟ ಬಂದರೂ ಸರಿಯೇ
ನೀ ಜೊತೆಗಿರಲು ನಾನು ಮರೆಯೇ
ಎಂತಹ ನೋವನ್ನು ಛಲದಿಂದ ಗೆಲ್ಲುವೆ
ಬೇಕು ಬೇಡಗಳನ್ನು ಎಂದೆಂದೂ ಕೇಳುತ್ತಿರುವೆ...
ಪ್ರೀತಿ- ಪ್ರೇಮದ ಅಮಲಿನಲ್ಲಿ
ಮಿಂದು ಹೋಗಿಹೆವು ನಾವು ಅಲ್ಲಿ
ಕರಗದಲೆ, ಕೊರಗದಲೆ, ಬಾಳು ಜೊತೆಯಾಗಿ
ಕೈಬಿಡದೆ ಸಾಕುವೆನು ಮದುವೆಯಾಗಿ....
ಮದುವೆ ಆಯ್ತು, ಮಕ್ಕಳಾಯ್ತು
ಎಂದು ಬಿಡುವುದಿಲ್ಲ ನಿನ್ನನು
ಸದಾ ಹೃದಯದಲಿ ಇಟ್ಟು ಪೂಜಿಸುವೆನು
ಮನೆಯೇ ಮಂದಿರ ಎಂದು ಕಾಯುವೆನು...
ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ಸಾಮಾಜಿಕ ಚಿಂತಕಿ, ಶಿಕ್ಷಕಿ. ಹಾಸನ.