ಕುಂಬಳೆ: ಕಂಬಾರು ಶ್ರೀದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ದಿನಾಂಕ 23- 10 - 2023 ಸೋಮವಾರ ಪೂರ್ವಾಹ್ನ ಗುಂಪೆ ವಲಯದ ಶ್ರೀರಾಮಾರ್ಪಣ ಭಜನಾ ತಂಡದ ಮಕ್ಕಳಿಂದ ನೃತ್ಯ ಭಜನೆ ನೆರವೇರಿತು.
ದೇವಸ್ಥಾನದ ಅರ್ಚಕರಾದ ಮರುವಳ ಗೋವಿಂದ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭಜನೆಯಲ್ಲಿ ಮಹಾಲಿಂಗ ಭಟ್ ನೇರೋಳು, ರಾಮಚಂದ್ರ ಭಟ್ ನೇರೋಳು, ಶಂಕರನಾರಾಯಣ ಭಟ್ ನೇರೋಳು, ಪ್ರಕಾಶ್ ಜಿ.ಯನ್. ಮತ್ತು ಆಶಾ ಗುಂಪೆ ಇವರು ಗಾಯನ ಹಾಗೂ ನೃತ್ಯ ಭಜನೆಯಲ್ಲಿ ವಿದ್ಯಾರ್ಥಿಗಳಾದ ಶ್ರುತಿ ಚೆಕ್ಕೆಮನೆ, ಆರಾಧ್ಯ ಗುಂಪೆ, ವಿಶ್ರುತ ಶರ್ಮ ಪಯ, ಸಾತ್ವಿಕ್ ಗುಂಪೆ, ಶ್ರೀರಾಮ ಶರ್ಮ ಎಡಕ್ಕಾನ, ಶ್ರೀಸುಧಾಮ ಶರ್ಮ ಎಡಕ್ಕಾನ, ಸಾರ್ಥಕ ಕೃಷ್ಣ ಚೆಕ್ಕೆಮನೆ, ಅಭಿನವ ನಾರಾಯಣ ಗುಂಪೆ ಇವರು ಭಾಗವಹಿಸಿದರು.
ಅರ್ಚಕರಾದ ಮರುವಳ ಗೋವಿಂದ ಭಟ್ ಭಜನಾ ತಂಡದ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಪ್ರಸಾದ ನೀಡಿ ಹರಸಿದರು.
ಮೆನೇಜರ್ ಇ.ಪರಮೇಶ್ವರ ಭಟ್ ಸ್ಮರಣಿಕೆ ನೀಡಿ ಶುಭಹಾರೈಸಿದರು. ಗುಂಪೆ ವಲಯ ಮಾತೃ ಪ್ರಧಾನೆ ಕಾವೇರಿ ಅಮ್ಮ ಗುಂಪೆ ಮತ್ತು ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಭಜನಾಸೇವೆಗೆ ಸಹಕಾರ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ