ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಫಿಶರೀಸ್ ಚಿತ್ರಾಪುರ ಕುಳಾಯಿಯಲ್ಲಿ ಗಾಂಧಿಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಹಾಗೂ ಸ್ವಚ್ಛತಾ ಸೇವೆ ನಡೆಸಲಾಯಿತು.
ಮುಂಬಯಿಯ ಉದ್ಯಮಿ ಕೆ.ಎಲ್.ಬಂಗೇರ ಮುಖ್ಯ ಅತಿಥಿಗಳಾಗಿ ಗಾಂಧಿ ಮತ್ತು ಶಾಸ್ತ್ರಿಯವರ ಜೀವನ ಆದರ್ಶಗಳನ್ನು ಪರಿಪಾಲಿಸ ಬೇಕೆಂದರು.
ಪಣಂಬೂರು ಮೊಗವೀರ ಮಹಸಭಾದ ಅಧ್ಯಕ್ಷ ಪಣಂಬೂರು ಮಾಧವ ಸುವರ್ಣ, ಶಾಲಾ ಸುರಕ್ಷಾ ಸಮಿತಿ ಸದಸ್ಯಕುಮಾರ್ ಬಂಗೇರ, ಕೂಳೂರು ಮೊಗವೀರ ಮಹಾಸಭಾದ ಪ್ರಭಾರ ಅಧ್ಯಕ್ಷ ತೇಜ ಪಾಲ್, ನಿವೃತ್ತ ಶಿಕ್ಷಕಿ ಪುಷ್ಪಾವತಿ, ಶಿಕ್ಷಣ ಪ್ರೇಮಿ ಶ್ರೀನಿವಾಸ ರಾವ್ ಅವರು ಮುಖ್ಯ ಅತಿಥಿಗಳಾಗಿದ್ದರು.
ಗೋವಿಂದದಾಸಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು, ಹಿರಿಯ ಶಿಕ್ಷಕಿ ಸುಕೇಶಿನಿ ವಂದಿಸಿದರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುಳಾ, ಶಿಕ್ಷಕಿಯರಾದ ನೀತಾತಂತ್ರಿಜೆ ಸಿಂತಾ ಉಪಸ್ಥಿತರಿದ್ದರು.
75ನೇ ಹುಟ್ಟು ಹಬ್ಬ ಆಚರಿಸುತ್ತಿರುವ ಶ್ರೀನಿವಾಸ ರಾವ್‍ಅವರನ್ನು ಆಭಿನಂದಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


