ಮಧ್ಯ ಭಾರತದ ಜೀವದಾತೆ ಗೋದಾವರಿ

Upayuktha
0



ಕ್ಷಿಣ ಭಾರತದ ಉಸಿರಾಗಿ ಸದಾ ಜೀವರಾಶಿಗಳನ್ನು ಪೋಷಿಸುತ ಪ್ರಕೃತಿಗೆ ಚೆಲುವನ್ನು ಧಾರೆ ಎರೆಯುತ ದೇವಾಲಗಳ ಪಾಲಿನ ಸಂಜೀವಿನಿಯಾಗುತ, ಸಕಲರನ್ನು ತನ್ನೊಡಲಲಿ ಕಾಪಾಡುತ ಸಾವಿರಾರು ಹೆಕ್ಟೇರ್ ಭೂಮಿಗಳಿಗೆ ನೀರಾವರಿಯ ಸೇವೆ ಒದಗಿಸುತ ರೈತನ ಆಪ್ತಮಿತ್ರನಾಗಿ, ಕೈಗಾರಿಕೆಯ ಬಲಗೈ ಬಂಟನಾಗಿ ದಕ್ಷಿಣ ಮಧ್ಯ ಭಾರತದಲ್ಲಿ ಹರಿಯುವ ನದಿಗಳಲ್ಲಿ ಒಂದಾಗಿರುವ ಪೌರಾಣಿಕ ಹಿನ್ನೆಲೆ ಹೊಂದಿರುವ ಐತಿಹಾಸಿಕ ನದಿಯೇ ಗೋದಾವರಿ.



ಈ ನದಿಯು ಹರಿದು ಹೋಗುವ ದಾರಿಯಲ್ಲಿ ನೂರಾರು ದೇವಾಲಯಗಳನ್ನು ಸೃಷ್ಟಿಸಿ ಪುರಾತನ ಕಾಲದ ಧಾರ್ಮಿಕ, ಸಾಹಿತ್ಯಿಕ ಸಂಸ್ಕೃತಿ ಬಿಂಬಿಸುವ ವಾಸ್ತುಶಿಲ್ಪವು ದೇವಾಲಯಗಳಲಿ ಅದ್ಭುತ ಕಲಾಕುಸುರಿಯಿಂದ ಕಲ್ಲಿನಲ್ಲಿ ಕೆತ್ತಲಾಗಿದ್ದು ಪ್ರಸ್ತುತ ಪೀಳಿಗೆಗೆ ಮಾದರಿಯಂತಿವೆ. ಈ ನದಿಯು ನಮ್ಮ ದೇಶದ ಹೆಮ್ಮೆಯ ರಾಜ್ಯವಾದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ. ಹೀಗೆ ಹರಿಯುತ್ತಾ ಹರಿಯುತ್ತಾ ವಿವಿಧ ರಾಜ್ಯಗಳ ದಾಹ ನೀಗಿಸುತ್ತಾ ಸಾಗುತ್ತದೆ.



ಈ ನದಿ ಮಧ್ಯ ಮತ್ತು ಆಗ್ನೇಯ ಭಾರತದ ಅತ್ಯಂತ ಪ್ರಮುಖವಾದ ನದಿ. ಇದು ಹಲವಾರು ಉಪನದಿಗಳನ್ನು ಹೊಂದಿದ್ದು ಬಹುಪಯೋಗಿ ಉದ್ದೇಶಗಳನ್ನು ಹೊಂದಿದ್ದು ಆರ್ಥಿಕತೆಯ ಬಲವರ್ಧನೆಗೆ ಶಕ್ತಿಯನ್ನು ತುಂಬಿ ದೇಶವನ್ನು ಆರ್ಥಿಕವಾಗಿ ಸಧೃಢಗೊಳಿಸಲು ದಾರಿದೀಪವಾಗಿದೆ. ಇದರ ಒಟ್ಟು ಉದ್ದ  910 ಮೈಲುಗಳಾಗಿದ್ದು ಸುಮಾರು 313,000 ಚದರ ಕಿಮೀ ಒಳಚರಂಡಿ ಜಲಾನಯನ ಪ್ರದೇಶವನ್ನು ಹೊಂದಿದೆ. ಈ ನದಿಯ ಪ್ರಮುಖ ಉಪನದಿಗಳೆಂದರೆ ಪ್ರವರ, ಪೂರ್ಣ, ಮಂಜಿರ, ಮ್ಯಾನೇರ್, ಪ್ರಾಣಹಿತ, ಇಂದ್ರಾವತಿ, ಶಬರಿ ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಕೃಷಿ, ಕೈಗಾರಿಕೆ, ವಿದ್ಯುತಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗಿದ್ದು ಆರ್ಥಿಕತೆಗೆ ಸಹಕಾರಿಯಾಗಿವೆ.




ಈ ಸಪ್ತ ಉಪನದಿಗಳನ್ನು ಹೊರತುಪಡಿಸಿ ಇದು ಅನೇಕ ಸಣ್ಣ ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಅತ್ಯಂತ ಉಪಯುಕ್ತವಾಗಿದ್ದು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಾವಿರಾರು ಜನರಿಗೆ ದಾರಿದೀಪವಾಗಿದ್ದು, ಮೀನುಗಾರಿಕೆಗೆ ಕೂಡ ಬಲು ಅನುಕೂಲಕರವಾಗಿದೆ. ಇಂದ್ರಾವತಿ ಉಪನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದ್ದು ಬಹುಬೇಡಿಕೆಯ ಜಲವಿದ್ಯುತ್ ಉತ್ಪಾದನೆಗಾಗಿ ಇಂದ್ರಾವತಿ ನೀರನ್ನು ಶಬರಿ ನದಿಗೆ ತಿರುಗಿಸಲಾಗಿದ್ದು ನೂರಾರು ರಾಜ್ಯಗಳ ಹಳ್ಳಿಗೆ ಬೆಳಕನ್ನು ಕಲ್ಪಿಸಿದೆ.



ಈ ನದಿಯು ಪಶ್ಚಿಮ ಘಟ್ಟ ಪ್ರದೇಶವನ್ನು ಬೇಧಿಸುತ್ತಾ ಹೋಗುತ್ತಾ ಪ್ರಾಣಿ, ಸಸ್ಯ ಸಂಕುಲಗಳನ್ನು ಪೋಷಿಸಿ ಆರೈಸುತ್ತಾ ಜೀವಸಂಕುಲಗಳನ್ನು ತಣಿಸುತ್ತಾ ಸಾಗುವ ಈ ನದಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜನನವನ್ನು ತಾಳಿ ಪ್ರಾಕೃತಿಕ ಸಂಪನ್ಮೂಲಗಳನ್ನು ದ್ವಿಗುಣಗೊಳಿಸುತ್ತಾ ದೇಶದ ಸಂಪತ್ತು ಹೆಚ್ಚಿಸುವಲ್ಲಿ ಈ ನದಿಯ ಪಾತ್ರ ಅಗಮ್ಯವಾದದ್ದು. ಸುತ್ತಮುತ್ತಲಿನ ಪರಿಸರದ ಸಮತೋಲನ ಕಾಪಾಡುತ್ತಾ ಪೂರಕವಾಗಿ ಪ್ರಕೃತಿ ಸಂರಕ್ಷಿಸುತ್ತಿದೆ.



ಅರಬ್ಬೀ ಸಮುದ್ರದಿಂದ ಕೇವಲ 50 ಮೈಲಿಗಳು ಮತ್ತು ಭಾರತದ ಪರ್ಯಾಯ ದ್ವೀಪದ ವಿಶಾಲವಾಗಿದ್ದು,  ಪ್ರಸ್ಥಭೂಮಿಯಲ್ಲಿ ಸಾಮಾನ್ಯವಾಗಿ ಪೂರ್ವಕ್ಕೆ ಹರಿಯುತ್ತದೆ ಹಾಗೆಯೇ ಈ ನದಿ ಹರಿಯುತ್ತಾ ನಿಜಾಮಾಬಾದ್ ನ ವಾಯುವ್ಯಕ್ಕೆ ಉತ್ತರ ತೆಲಂಗಾಣ ರಾಜ್ಯವನ್ನು ಪ್ರವೇಶಿಸುತ್ತದೆ. ಮತ್ತು ಮುಂದೆ ವಿಶಾಲವಾದ ಕಣಿವೆಯ ಮೂಲಕ ಹರಿದು ದಟ್ಟ ಕಾಡುಗಳ ಮಧ್ಯ ಶಾಂತದಿ ಮುನ್ನಡೆಯುತ್ತಾ ಅರಣ್ಯವನ್ನು ಪ್ರವೇಶಿಸುತ್ತ ಸಾಗುತ್ತದೆ.ಈ ನದಿಯು ಪೂರ್ವ ಘಟ್ಟಗಳ ಶ್ರೇಣಿಗಳಲ್ಲಿ ನಂತರ ಆಂಧ್ರಪ್ರದೇಶದಾದ್ಯಂತ ಹರಿಯುತ್ತದೆ.




ಗೋದಾವರಿ ನದಿಯು 312,812 km ವ್ಯಾಪ್ತಿ ಪ್ರದೇಶವನ್ನು ಹೊಂದಿದೆ. ಈ ನದಿಯ ಜಲಾನಯನ ಪ್ರದೇಶವನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೇಲ್ಭಾಗ, ಮಧ್ಯಭಾಗ, ಕೆಳಭಾಗವನ್ನು ಹೊಂದಿದೆ. ಇವು ಒಟ್ಟು ಜಲಾನಯನ ಪ್ರದೇಶದ 24% ಪ್ರತಿಶತದಷ್ಟು ಇದೆ. ಈ ನದಿಗಳ ವಾರ್ಷಿಕ ಸರಾಸರಿ ಒಳ ಹರಿವು ಸುಮಾರು 110 ಘನ .ಮೀಟರ್ ಗಳಷ್ಟು ಇದ್ದು ಆರ್ಥಿಕ ಚಟುವಟಿಕೆಗಳಿಗೆ ವರದಾನವಾಗಿದೆ. ನೀರಿನ ಲಭ್ಯತೆಯ 50%  ನೀರನ್ನು ಬಳಸಿಕೊಳ್ಳಲಾಗುತ್ತಿದ್ದು ನದಿ ತೀರದ ರಾಜ್ಯಗಳ ನಡುವೆ ನೀರಿನ ಹಂಚಿಕೆಯನ್ನು  ಗೋದಾವರಿ ಜಲವಿವಾದ ಮಂಡಳಿಯು ನಿಯಂತ್ರಿಸುತ್ತದೆ.




ಈ ನದಿಯು ವಿವಿಧ ರಾಜ್ಯಗಳನ್ನು ತನ್ನೊಡಲಲಿ ಪೋಷಿಸಿ ವಿವಿಧ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಬಲ ನೀಡುವುದಲ್ಲದೆ. ಅಗಾಧವಾದ ದೇವಾಲಯಗಳನ್ನು ತಾಯಿಯಂತೆ ಸದಾ ಪೋಷಿಸುತ್ತ ಜೀವಕಳೆಯನ್ನು ನೀಡುತ್ತದೆ. ಕಣಿವೆಗಳನ್ನು  ಬೇಧಿಸುತ್ತಾ ಸುತ್ತಮುತ್ತಲಿನ ಬರಡಾದ ಭೂಮಿಗೆ ಪುನರ್ಜನ್ಮ ನೀಡುತ್ತಾ ಸದಾ ರಕ್ಷಿಸುತ್ತದೆ ಈ ನದಿಯು ಯಾವುದೇ ರಾಜ್ಯದಲ್ಲಿ ಸ್ಥಿರವಾಗಿ ಹರಿಯದೆ ಹರಿಯುತ್ತ ಹರಿಯುತ್ತ ವಿವಿಧ ರಾಜ್ಯಗಳತ್ತ ಮುಖ ಮಾಡಿ ಹಸಿರಿನಿಂದ ಪ್ರಕೃತಿಯ ಕಳೆಯನ್ನು ದ್ವಿಗುಣಗೊಳಿಸುತ್ತಾ ಸದಾ ಜೀವಸಂಕುಲಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ.




ಈ ನದಿಯಿಂದ ಪ್ರವಾಹ ಭೀತಿಯು ಎದುರಾಗುತ್ತಿದ್ದು 1986 ರಲ್ಲಿ ಈ ನದಿಯು 3.6 ಮಿಲಿಯನ್ ಕ್ಯೂಸೆಕ್ ಗಳಷ್ಟು ಪ್ರವಾಹವು ದಾಖಲಾಗಿತ್ತು. ಈ ನದಿ ಮಹಾರಾಷ್ಟ್ರದಲ್ಲಿ ವ್ಯಾಪಕ ಪ್ರದೇಶವನ್ನು ಆವರಿಸಿದ್ದು ವಿವಿಧ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ನಾಸಿಕ್ ಜಿಲ್ಲೆಯಲ್ಲಿ ಅಣೆಕಟ್ಟು ನಿರ್ಮಿಸಲಾಗಿದ್ದು ಗಂಗಾಪುರ ಜಲಾಶಯಕ್ಕೆ ಹರಿಯುತ್ತಾ ತನ್ನ ಪಾಠವನ್ನು ಬದಲಿಸುತ್ತಾ ಈಶಾನ್ಯ ದಿಕ್ಕಿನತ್ತ ಸಾಗುತ್ತದೆ. ಇನ್ನೊಂದು ಕಶಿಪ್ ಅಣೆಕಟ್ಟು ನಿರ್ಮಿಸಲಾಗಿದ್ದು ಈ ಅಣೆಕಟ್ಟು ಕುಡಿಯುವ ನೀರಿನ ಸೌಲಭ್ಯ ಒದಗಿಸುತ್ತದೆ.ನಾಶಿಕ್ ಮಹಾರಾಷ್ಟ್ರದ ದೊಡ್ಡ ನಗರಗಳಲ್ಲಿ ಒಂದಾಗಿದೆ ಈ ಜಿಲ್ಲೆಗೆ ಅಗಾಧವಾದ ಪ್ರಮಾಣದ ನೀರು ಕುಡಿಯಲಿಕ್ಕೆ ಒದಗಿಸಿ ಜನರ ಪಾಲಿಗೆ ಸಂಜೀವಿನಿಯಾಗಿದೆ.




ಈ ನದಿಯು ಹರಿಯುತ್ತ ವಿವಿಧ ರಾಜ್ಯಗಳಲ್ಲಿ ಅದರಲ್ಲೂ ಮಹಾರಾಷ್ಟ್ರದಲ್ಲಿ ವಿವಿಧ ದೇವಾಲಯಗಳು ಗೋದಾವರಿ ನದಿಯ ದಡದಲ್ಲಿ ಸ್ಥಾಪಿತವಾಗಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ತ್ರಯಂಬಕೇಶ್ವರ್ ಕೋಪರಗಾವ್, ಪುಂಟಂಬಾ, ಪೈಥಾನ್ (ಶಾತವಾಹನರ ಹಳೆಯ ರಾಜಧಾನಿ)ಗಳಲ್ಲಿ ಹಲವಾರು ಪುರಾತನ ದೇವಾಲಯಗಳಿವೆ. ಈ ನದಿಯು ಮಹಾರಾಷ್ಟ್ರದ ಕೋಪರಗಾವ್ನ್  ಹತ್ತಿರ ಪ್ರವೇಶಿಸಿ ಔರಂಗಾಬಾದ್ ಮತ್ತು ಅಹಮದ್ ನಗರ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ಗಡಿಯನ್ನು ಹೊಂದಿದ್ದು ಪ್ರಾಕೃತಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿದೆ.ಅಲ್ಲದೆ ನೂರಾರು ಜಾತಿಯ ಸಸ್ಯ ಪ್ರಭೇದಗಳು ಕೂಡ ಇಲ್ಲಿ ನೆಲೆಗೊಂಡಿವೆ. ಈ ನದಿಯ ದಡದಲ್ಲಿ ಇನ್ನು ಅನೇಕ ಐತಿಹಾಸಿಕ ದೇವಾಲಯಗಳು ಸ್ಥಾಪಿತಗೊಂಡು ಇತಿಹಾಸದಲ್ಲಿ ಈ ನದಿಯ ಹೆಸರು ಅಜರಾಮರವಾಗಿದೆ.




ಒಟ್ಟಿನಲ್ಲಿ ಗೋದಾವರಿ ನದಿಯು ದೇಶದ ಆರ್ಥಿಕ, ಸಾಮಾಜಿಕ, ಮತ್ತು ಧಾರ್ಮಿಕತೆಗೆ ಹೆಸರಾಗಿದ್ದು ತನ್ನದೇ ಆದ ರೀತಿಯಲ್ಲಿ ಜನರನ್ನು ಆರ್ಥಿಕತೆಯ ಮಾರ್ಗದಲ್ಲಿ ಮುನ್ನಡೆಸಿ ಬರಡಾದ ಜನರ ಬದುಕಿಗೆ ಉದ್ಯೋಗ ಒದಗಿಸಿ ಭರವಸೆ ಮೂಡಿಸಿ ಬಾಳಿಗೆ ನೆಲೆಯನ್ನು ಕಲ್ಪಿಸಿದೆ.ಅಲ್ಲದೆ ಕೃಷಿ,ಕೈಗಾರಿಕೆಗೆ ವರವಾಗುತ ದೇಶದ ಆರ್ಥಿಕತೆಗೆ ಬಲ ತುಂಬಿದೆ.ಹಾಗಾಗಿ ಗೋದಾವರಿ ನದಿಯು ಬರಿ ನದಿಯಲ್ಲ ಅಸಂಖ್ಯಾತ ಜನರ ಬಾಳಿಗೆ ದಾರಿದೀಪ.



-ಅವಿನಾಶ ಸೆರೆಮನಿ,


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top