ಕಾಸರಗೋಡು: ಕಾಸರಗೋಡು ಕನ್ನಡ ಬಳಗ(ರಿ), ವಿದ್ಯಾನಗರ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತಿವರ್ಷದಂತೆ ಅಕ್ಟೋಬರ್ 21 ರ ಶನಿವಾರದಂದು ದಸರಾ ನಾಡಹಬ್ಬ ಕಾರ್ಯಕ್ರಮ ಆಯೋಜಿಸುತ್ತಿದೆ. ಬೆಳಗ್ಗೆ 9.30 ರಿಂದ ಕಾಸರಗೋಡಿನ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾವಳಿಗಳು ನಡೆಯಲಿವೆ.
ಮಧ್ಯಾಹ್ನ 12.30 ರಿಂದ ಸ್ನೇಹರಂಗದ ವಿದ್ಯಾರ್ಥಿಗಳಿಂದ ಜನಪದ ಹಾಡು, ಯಕ್ಷಗಾನ ನೃತ್ಯ, ಕಾವ್ಯ ವಾಚನ, ರೂಪಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಮಧ್ಯಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಪ್ರಾಂಶುಪಾಲರಾದ ಡಾ. ಅನಿಲ್ ಕುಮಾರ್ ವಿ.ಎಸ್ ಉದ್ಘಾಟಿಸಲಿದ್ದಾರೆ. ಶ್ರೀಮತಿ. ಸುಜಾತ ಎಸ್, ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಪ್ರೊ ಕೆ ಎ ಪದ್ಮನಾಭ ಪೂಜಾರಿಯವರು ಸಾಂಸ್ಕೃತಿಕ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.
ಕಾಸರಗೋಡು ಜಿಲ್ಲೆಯ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಗಾಗಿ 1.ಕವಿತಾ ರಚನೆ 2. ಭಾಷಣ 3, ಭಾವಗೀತೆ 4. ರಸಪ್ರಶ್ನೆ , ಪದವಿಪೂರ್ವ ವಿಭಾಗ ವಿದ್ಯಾರ್ಥಿಗಳಿಗಾಗಿ1. ಕಂಠಪಾಠ 2.ಕವಿತಾ ರಚನೆ ಸ್ಪರ್ಧೆಗಳು ಜರಗಲಿವೆ.
ಹಿಂದಿನ ದಿನ ಅಕ್ಟೋಬರ್ 20ರ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ 1.ಕವಿತಾ ರಚನೆ , 2. ಕಥಾ ರಚನೆ 3, ಭಾವಗೀತೆ ,4. ಭಾಷಣ ಸ್ಪರ್ಧೆಗಳು ನಡೆಯಲಿವೆ ಎಂದು ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ