ಸಂತ ಅಲೋಶಿಯಸ್ ಕಾಲೇಜಿನಲ್ಲಿ `ಹುಲಿವೇಷ' ಕೃತಿ ಲೋಕಾರ್ಪಣೆ

Upayuktha
0



ಮಂಗಳೂರು: ಸಂತ ಅಲೋಶಿಯಸ್ ಪ್ರಕಾಶನದ ವತಿಯಿಂದ ಪ್ರಕಟಣೆಗೊಂಡ ಡಾ. ಚಂದ್ರಶೇಖರ ಶೆಟ್ಟಿಯವರು ರಚಿಸಿದ `ಹುಲಿವೇಷ' ಕೃತಿಯ ಲೋಕಾರ್ಪಣೆ ಸಮಾರಂಭವು ಅಕ್ಟೋಬರ್ 18 ಬುಧವಾರದಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. 



ಖ್ಯಾತ ರಂಗಕರ್ಮಿ, ನಾಟಕಗಾರ ಹಾಗೂ ಸಾಹಿತಿಯಾದ ಡಾ| ನಾ. ದಾಮೋದರ ಶೆಟ್ಟಿ ಅವರು ಪುಸ್ತಕ ಲೋಕಾರ್ಪಣೆ ಮಾಡಿ ನಮ್ಮ ತುಳುನಾಡಿನ ಸಂಸ್ಕøತಿಯನ್ನು ಉಳಿಸುವ ಕಾರ್ಯದಲ್ಲಿ ಇಂತಹ ಪುಸ್ತಕಗಳು ಅನಿವಾರ್ಯ ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿಯವರು ಪುಸ್ತಕದ ಕುರಿತಾಗಿ ಮಾತನಾಡಿದರು. ಅವರು ಲೇಖಕರ ಪ್ರಯತ್ನಗಳನ್ನು ಕೊಂಡಾಡಿ ಇದು ಈಗಿನ ಕಾಲದ ಅನೀರ್ವಾತೆ ಎಂದು ತಿಳಿಸಿದರು.



ಸಂತ ಅಲೋಶಿಯಸ್ ಸಂಸ್ಥೆಗಳ ವರಿಷ್ಠ ವಂದನೀಯ ಫಾ. ಮೆಲ್ವಿನ್‍ಜೆ. ಪಿಂಟೋರವರು ತನ್ನ ಬಾಲ್ಯಜೀವನವನ್ನು ನೆನಪು ಮಾಡಿಕೊಂಡು ಹುಲಿವೇಷ ಕೊಡುತ್ತಿದ್ದ ಉತ್ಸಾಹವನ್ನು ನೆನಪಿಸಿದರು. ಅದೇ ರೀತಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರವೀಣ್ ಮಾರ್ಟಿಸ್‍ ಎಸ್. ಜೆ. ಅವರು ಇಂತಹ ಕೃತಿಗಳು ಇನ್ನೂ ಮೂಡಿಬರಲಿ ಎಂದು ತಿಳಿಸಿ ಲೇಖಕರನ್ನು ಅಭಿನಂದಿಸಿದರು. ಹಿರಿಯ ಹುಲಿವೇಷ ಕಲಾವಿದ ಕದ್ರಿ ಗಂಗಾಧರ ದೇವಾಡಿಗ, ತಾಸೆ, ಡೋಲು ಕಲಾವಿದರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಮೊಹಮ್ಮದ್ ಆಸಿಫ್ ಅವರ ಕಲಾಪೋಷಕ ಸೇವೆಯನ್ನು ಗುರುತಿಸಲಾಯಿತು.



ಲೇಖಕ ಡಾ| ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಪ್ರಕಾಶನದ ನಿರ್ದೇಶಕಿ ಡಾ| ವಿದ್ಯಾ ವಿನುತಾ ಡಿಸೋಜಾರವರು ವಂದನಾರ್ಪಣೆಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top