ಹಾಸನ: ಹೆಚ್.ಕೆ. ತ್ಯಾಗರಾಜ್‌ರವರ ಸಂಸ್ಮರಣೆ, ಭಾವಪೂರ್ಣ ಶ್ರದ್ಧಾಂಜಲಿ

Upayuktha
0



ಹಾಸನ: ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ರಾಜರತ್ನ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ, ಪ್ರತಿಮಾ  ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಇಂದು (ಅ.5) ಎನ್. ಆರ್. ವೃತ್ತದ ಬಳಿ ಇರುವ ಡಾ. ಪುನೀತ್ ರಾಜಕುಮಾರ್ ಅವರ ಪ್ರತಿಮೆಯ ಬಳಿ ಕಾರ್ಯಕರ್ತರಾದ ಹೆಚ್. ಕೆ. ತ್ಯಾಗರಾಜ್‌ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಸಂಘದ ಸದಸ್ಯರೆಲ್ಲರೂ  ಅಧ್ಯಕ್ಷರಾದ ಎಚ್. ಎಸ್. ರತೀಶ್ ಕುಮಾರ್ ಮತ್ತು, ಮಹಿಳಾ ಅಧ್ಯಕ್ಷೆ ಶ್ರೀಮತಿ ಹೆಚ್. ಎಸ್. ಪ್ರತಿಮಾ  ಹಾಸನ್ ರವರ ನೇತೃತ್ವದಲ್ಲಿ ನಡೆದ ಈ ಭಾವಪೂರ್ಣ ಶ್ರದ್ಧಾಂಜಲಿಯ ಕಾರ್ಯಕ್ರಮ ನಡೆಸಿದರು. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್‌ರವರು ತ್ಯಾಗರಾಜ್‌ರವರನ್ನು ಸ್ಮರಿಸಿ ಮಾತನಾಡಿದರು. ತ್ಯಾಗರಾಜ್ ಅವರು ನಮ್ಮ ಸಂಘದ ಕಾರ್ಯಕರ್ತರಾಗಿದ್ದು, ಹಲವಾರು ಬಾರಿ ರಕ್ತದಾನವನ್ನು ಮಾಡಿದ್ದರು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯವನ್ನು ನಿರ್ವಹಿಸುತ್ತಿದ್ದರು.  ಇವರ ಅಗಲಿಕೆಯು ಎಲ್ಲರ ಮನಸ್ಸಿಗೆ ನೋವನ್ನು ಉಂಟು ಮಾಡಿದೆ. ಅವರ ಅಗಲಿಕೆಯು ನಮಗೆಲ್ಲ ಭರಿಸಲಾಗದ ನಷ್ಟ ಉಂಟುಮಾಡಿದೆ. ಅವರ ಕಾರ್ಯಗಳು ಅವಿಸ್ಮರಣೀಯ ಎಂದರು.


ಅವರ ಅಗಲಿಕೆ ನಂತರದ ಸಮಯದಲ್ಲಿ ಅದನ್ನು ನೆನಪಿಸಿಕೊಳ್ಳಬೇಕು, ಮರೆಯಬಾರದು ಎಂದರು. ಎಲ್ಲಾ  ಪದಾಧಿಕಾರಿಗಳು ಮತ್ತು ಸದಸ್ಯರೆಲ್ಲ ತ್ಯಾಗರಾಜ್  ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಇವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಣೆ ಮಾಡಿದರು. ಶ್ರದ್ಧಾಂಜಲಿಯಲ್ಲಿ ಮಹಿಳಾ ಅಧ್ಯಕ್ಷರು ಶ್ರೀಮತಿ ಹೆಚ್. ಎಸ್. ಪ್ರತಿಮಾ  ಹಾಸನ್, ಪದಾಧಿಕಾರಿಗಳಾದ ಮಮತಾ, ಮಂಜುಳಾ, ಅಂಬಿಕಾ, ಗೀತಮ್ಮ, ಅಧ್ಯಕ್ಷರು ಹೆಚ್. ಎಸ್. ರತೀಶ್ ಕುಮಾರ್, ಮೋಹನ್ ಕುಮಾರ್, ಮಂಗಳೂರು ರವಿ, ಸುಬ್ಬಣ್ಣ, ಕುಮಾರ್, ಮುಬಾರಕ್, ವಿವೇಕ್, ಅನಿಲ್, ಕುಮಾರ್ ಮಾಂತೇಶ್, ಸಾದಿಕ್. ತ್ಯಾಗರಾಜರವರ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ  ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top