ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಕೇಸು ದಾಖಲು: ದ.ಕ. ಜಿಲ್ಲಾ ಬಿಜೆಪಿ ಖಂಡನೆ

Upayuktha
0

ಮಂಗಳೂರು: ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯಕ್ಕೊಳಗಾದ ಬಡ ಕುಟುಂಬದ ಪರವಾಗಿ ನಿಂತಿರುವ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ಮುಖಾಂತರ ಕೇಸು ದಾಖಲಿಸಿದ ಕಾಂಗ್ರೇಸ್‌ ಸರಕಾರದ ನೀತಿಯನ್ನು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.


ಅರಣ್ಯ ಅಧಿಕಾರಿಗಳ ದೌರ್ಜನ್ಯವನ್ನು ಕಂಡಾಗ ನಾವು ಪ್ರಜಾಪ್ರಭುತ್ವ ರಾಜ್ಯದಲ್ಲಿದ್ದೇವಾ ಅಥವಾ ಗೂಂಡಾ ಪ್ರವೃತಿಯ ರಾಜ್ಯದಲ್ಲಿದ್ದೇವಾ ಎಂದು ಸಂಶಯ ಬರುತ್ತಿದೆ. ನಮ್ಮ ಕ್ಷೇತ್ರದ ಬಡ ಕುಟುಂಬದ ಪರವಾಗಿ ನಿಂತು ಅರಣ್ಯ ಅಧಿಕಾರಿಗಳ ದೌರ್ಜನ್ಯವನ್ನು ನಿಲ್ಲಿಸಿದ ಶಾಸಕ ಹರೀಶ್‌ ಪೂಂಜಾರ ನಡೆ ಸರಿಯಾಗಿದೆ. ಜನರ ಮೇಲೆ ಸರಕಾರಿ ಅಧಿಕಾರಿಗಳು ದೌರ್ಜನ್ಯವೆಸಗಿದಾಗ ಶಾಸಕರು ಕೈಕಟ್ಟಿ ಕೂರಬೇಕಾ? ಎಂದು ಅವರು ಪ್ರಶ್ನಿಸಿದ್ದಾರೆ.


ಸರಕಾರಿ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ದುರದೃಷ್ಟ. ಶಿವಮೊಗ್ಗದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಮೇಲೆ ಕಲ್ಲು ಎಸೆದ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಹಿಂದೇಟು ಹಾಕಿದ್ದನ್ನು ಅಧಿಕಾರಿಗಳು ನೆನಪು ಮಾಡಿಕೊಳ್ಳಿ. ಸರಕಾರಿ ಅಧಿಕಾರಿಗಳಿಗೆ ಜನರೇ ರಕ್ಷಣೆ ನೀಡುವುದು ಹೊರತು ಸರಕಾರ ರಕ್ಷಣೆ ನೀಡುವುದಿಲ್ಲ. ಆದುದರಿಂದ ಜನರ ಜೊತೆ ನಿಂತ ಶಾಸಕ ಹರೀಶ್‌ ಪೂಂಜಾರವರ ಮೇಲೆ ದಾಖಲಿಸಿದ ಕರ್ತವ್ಯಕ್ಕೆ ಅಡ್ಡಿ ಮಾಡಿದರೆಂಬ ಸುಳ್ಳು ಪ್ರಕರಣವನ್ನು ಸರಕಾರ ಕೂಡಲೇ ಕೈಬಿಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷರು ಆಗ್ರಹಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top