ಬೆಂಗಳೂರು: ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿತವಾಗಿದ್ದ ಅಖಿಲ ಭಾರತ ಥಲ್ ಸೈನಿಕ್ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್.ಸಿ.ಸಿ ಕೆಡೆಟ್‌ಗಳು ಐತಿಹಾಸಿಕ ಸಾಧನೆ ಮಾಡಿರುತ್ತಾರೆ.
ಎರಡನೇ ಹಂತದ ರಕ್ಷಣಾಪಡೆ ಎಂಬ ಖ್ಯಾತಿಯನ್ನು ಹೊಂದಿರುವ ಎನ್.ಸಿ.ಸಿ.ಯ ಯುವ ಕಡೆಟ್‌ಗಳಲ್ಲಿ ಭಾರತೀಯ ಸೇನೆಯ ಬಗ್ಗೆ ಒಲವು ಮೂಡಿಸುವ ಸಲುವಾಗಿ ಸೇನೆಯ ವೃತ್ತಿಪರ ತರಬೇತಿ ಮತ್ತು ಸ್ಪರ್ಧೆಗಳನ್ನು ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸಿ, ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳಸಿ, ಶಿಸ್ತು, ಸೇವಾ ಮನೋಭಾವ, ರಾಷ್ಟ್ರಭಕ್ತಿ, ನಾಯಕತ್ವದ ಗುಣಗಳು, ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಉದ್ದೇಶಗಳೊಂದಿಗೆ ಆಯೋಜಿತವಾಗಿತ್ತು.
ಈ ಶಿಬಿರದಲ್ಲಿ ಭಾರತದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ ಆರ್ಮಿನಿಂಗ್‌ನ 17 ಎನ್.ಸಿ.ಸಿ. ನಿರ್ದೇಶನಾಲಯಗಳು ಭಾಗವಹಿಸಿದ್ದ ಈ ಶಿಬಿರದಲ್ಲಿ ಇದೇ ಪ್ರಥಮ ಬಾರಿಗೆ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಸೀನಿಯರ್ ಡಿವಿಜನ್ ಮತ್ತು ಸೀನಿಯರ್ ವಿಂಗ್‌ನ ಕೆಡೆಟ್‌ಗಳು ಎಲ್ಲಾ ಸ್ಪರ್ಧೆಗಳಲ್ಲಿ ಜಯಗಳಿಸಿ 38 ಚಿನ್ನದ ಪದಕ, 14 ಕಂಚಿನ ಪದಕ ಮತ್ತು 6 ಪಾರಿತೋಷಕಗಳನ್ನು ಗಳಿಸುವ ಮುಖೇನ ಸಮಗ್ರ ಪ್ರಶಸ್ತಿಯನ್ನು ಪಡೆದು ದಾಖಲೆ ನಿರ್ಮಿಸಿರುತ್ತಾರೆ.
ತಂಡದ ನೇತೃತ್ವವನ್ನು 4ನೇ ಕರ್ನಾಟಕ ಬೆಟಾಲಿಯನ್‌ನ ಕಂಟಿನ್ ಜಂಟ್ ಕಮಾಂಡರ್ ಕ್ಯಾಪ್ಟನ್ ಹರಿಪ್ರಸಾದ್ ಬಿ.ಎಂ ವಹಿಸಿದ್ದರು. ಈ ಐತಿಹಾಸಿಕ ಸಾಧನೆಗೆ ಕರ್ನಾಟಕ & ಗೋವಾ ನಿರ್ದೇಶನಾಲಯದ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮೋಡರ್ ಭೂಪೇಂದ್ರ ಸಿಂಗ್ ಕನ್ವರ್‌ರವರು ಕೆಡೆಟ್‌ಗಳಿಗೆ ಹಾಗೂ ತರಬೇತುದಾರ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ