ಎಡನೀರು ಮಠದಲ್ಲಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಬಳಗದವರಿಂದ 'ನೃತ್ಯಾರ್ಚನಂ'

Upayuktha
0


ಪುತ್ತೂರು: ಶ್ರೀಮತ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠ, ಕಾಸರಗೋಡು ಇಲ್ಲಿನ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ಬಳಗದವರಿಂದ "ನೃತ್ಯಾರ್ಚನಂ" ಭರತನಾಟ್ಯ ಕಾರ್ಯಕ್ರಮ ನೆರವೇರಿತು.


ಮಂಜುಳಾ ಸುಬ್ರಹ್ಮಣ್ಯ ಸೇರಿದಂತೆ ಅವರ ಶಿಷ್ಯೆಯರಾದ ಅವನಿ ಬೆಳ್ಳಾರೆ ಹಾಗೂ ರುದ್ಧಿ ಎಂ.ವಿ ನೃತ್ಯಪ್ರದರ್ಶನ ನೀಡಿದರು. ಹಿಮ್ಮೇಳ ಕಲಾವಿದರಾಗಿ ಸೌರಮ್ಯ ಸೈಜು ನಟುವಾಂಗದಲ್ಲಿ, ಭಾಗ್ಯಲಕ್ಷ್ಮೀ ಗುರುವಾಯೂರು ಹಾಡುಗಾರಿಕೆಯಲ್ಲಿ, ಪವನ್ ಮಾಧವ್ ಬೆಂಗಳೂರು ಮೃದಂಗ ವಾದನದಲ್ಲಿ ಹಾಗೂ ಸನತ್ ಕುಮಾರ್ ನೈಭಿ ವಯಲಿನ್ ವಾದನದಲ್ಲಿ ಸಹಕರಿಸಿದ್ದರು. ಆಶಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top