ತುಳುಕೂಟದ ಮಹಾಸಭೆ : ಧನಕೀರ್ತಿ ಬಲಿಪ ಅಧ್ಯಕ್ಷರಾಗಿ ಪುನರಾಯ್ಕೆ

Upayuktha
0


ಮೂಡುಬಿದಿರೆ: ತುಳುಕೂಟ (ರಿ) ಮೂಡುಬಿದಿರೆ ಇದರ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕರು ಹಾಗೂ ಸಾಮಾಜಿಕ ಮುಂದಾಳುಗಳೂ ಆಗಿರುವ ಹಂಡೇಲುಗುತ್ತು ಧನಕೀರ್ತಿ ಬಲಿಪ ಮತ್ತು ತುಳುಕೂಟದ ಪದಾಧಿಕಾರಿಗಳು ಸರ್ವಾನುಮತದಿಂದ ಪುನರಾಯ್ಕೆಗೊಂಡಿರುತ್ತಾರೆ.


ಕನ್ನಡ ಭವನದಲ್ಲಿರುವ ತುಳುಕೂಟದ ಕಛೇರಿಯಲ್ಲಿ ಇತ್ತೀಚೆಗೆ ನಡೆದ ಕೂಟದ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಗೌರವಾಧ್ಯಕ್ಷರಾಗಿರುವ ನ್ಯಾಯವಾದಿ ಬಾಹುಬಲಿ ಪ್ರಸಾದ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನೆರವೇರಿದ್ದು ಡಾ.ಎಂ. ಮೋಹನ ಆಳ್ವ ಗೌರವಾಧ್ಯಕ್ಷರಾಗಿ, ಚಂದ್ರಹಾಸ ದೇವಾಡಿಗ ಕಾರ್ಯಾಧ್ಯಕ್ಷರಾಗಿ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಜಯಂತಿ ಎಸ್.ಬಂಗೇರ ಉಪಾಧ್ಯಕ್ಷರಾಗಿ, ಕೆ.ವೇಣುಗೋಪಾಲ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸದಾನಂದ ನಾರಾವಿ ಜೊತೆ ಕಾರ್ಯದರ್ಶಿಯಾಗಿ, ಸುಭಾಶ್ಚಂದ್ರ ಚೌಟ ಕೋಶಾಧಿಕಾರಿಯಾಗಿ  ಪುನರಾಯ್ಕೆಯಾಗಿರುತ್ತಾರೆ. ವಕೀಲರಾದ ಶ್ವೇತಾ ಜೈನ್ ಉಪಾಧ್ಯಕ್ಷರಾಗಿ ಮತ್ತು ಪ್ರತೀಕ್ ಸಾಲ್ಯಾನ್ ಹಾಗೂ ಪುಷ್ಪರಾಜ್ ಜೈನ್ ಅವರನ್ನು ಸಂಘಟನಾ ಕಾರ್ಯದರ್ಶಿಗಳಾಗಿ ಹೊಸದಾಗಿ ನೇಮಕ ಮಾಡಲಾಗಿದೆ.


ಜಿನೇಂದ್ರ ಜೈನ್, ಜಯಪ್ರಕಾಶ್ ಪಡಿವಾಳ್, ವಿಶ್ವನಾಥ ಬೋವಿ, ಸುರೇಶ್ ಕೋಟ್ಯಾನ್, ಯತಿರಾಜ್ ಶೆಟ್ಟಿ, ಪದ್ಮನಾಭ ಮಿಜಾರು, ಗುರು ಎಂ.ಪಿ, ಪ್ರಸಾದ್ ಭಂಡಾರಿ, ಚೇತನಾ ಹೆಗ್ಡೆ, ಸುವರ್ಣ ಸಿ. ದೇವಾಡಿಗ ಮತ್ತು ನಾರಾಯಣ ಕುಂದರ್ ಅವರನ್ನು ಕಾರ್ಯಕಾರಿ ಸಮಿತಿಯ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top