ಮಂಗಳೂರು: ಸೌಂದರ್ಯವರ್ಧಕಗಳು ಹಾಗೂ ವೆಲ್‍ನೆಸ್ (ಸುಕ್ಷೇಮ) ಉತ್ಪನ್ನಗಳಿಗಾಗಿ ನಗರದ ಫಿಜಾ ಬೈ ನಕ್ಸಸ್ ಮಾಲ್‍ನಲ್ಲಿ ವಿಶೇಷ 'ದಿ ಗ್ಲೋಸ್ ಬಾಕ್ಸ್' ಅಭಿಯಾನ ಆರಂಭಿಸಲಾಗಿದೆ.
ಇದು ಸೆಪ್ಟೆಂಬರ್ 8 ರಿಂದ ಆರಂಭವಾಗಲಿದ್ದು, ಹಬ್ಬ-ಹರಿದಿನಗಳ ಈ ಸಂದರ್ಭದಲ್ಲಿ ಪ್ರಮುಖವಾಗಿ ಅತ್ಯುತ್ತಮ ಬ್ಯೂಟಿ ಬ್ರ್ಯಾಂಡ್‍ಗಳು ಸೆಪ್ಟೆಂಬರ್ ತಿಂಗಳಾದ್ಯಂತ ತಮ್ಮ ಉತ್ಪನ್ನಗಳ ಮೇಲೆ ಅತ್ಯುತ್ತಮ ಡೀಲ್‍ಗಳನ್ನು ಅಥವಾ ರಿಯಾಯ್ತಿಗಳನ್ನು ನೀಡುತ್ತವೆ.
ಭಾರತದ ಅತಿದೊಡ್ಡ ರೀಟೇಲ್ ಪ್ಲಾಟ್‍ಫಾರ್ಮ್ ಆಗಿರುವ ನೆಕ್ಸಸ್ ಮಾಲ್ ಸೌಂದರ್ಯ ಪ್ರಿಯರಿಗೆಂದೇ `ದಿ ಗ್ಲೋಸ್ ಬಾಕ್ಸ್' ಅಭಿಯಾನವನ್ನು ಆರಂಭಿಸಲು ಸಜ್ಜಾಗಿದೆ. ದೇಶಾದ್ಯಂತ ಇರುವ ತನ್ನೆಲ್ಲಾ 17 ಮಾಲ್‍ಗಳಲ್ಲಿ ಅನನ್ಯವಾದ ಕಾಸ್ಮೆಟಿಕ್ಸ್, ಗ್ರೂಮಿಂಗ್ ಮತ್ತು ವೆಲ್‍ನೆಸ್ ಅಭಿಯಾನವನ್ನು ಆರಂಭಿಸುತ್ತಿದೆ. ಸೌಂದರ್ಯ ಮತ್ತು ವೆಲ್‍ನೆಸ್ ಉದ್ಯಮದ ಭವಿಷ್ಯವನ್ನು ಪುನರ್ ವ್ಯಾಖ್ಯಾನ ಮಾಡುವುದು ಹಾಗೂ ನೀವು ಹಿಂದೆಂದೂ ಪಡೆಯದೇ ಇರುವಂತಹ ಸೌಂದರ್ಯ ಅನುಭವವನ್ನು ಈ ಅಭಿಯಾನ ನೀಡುತ್ತದೆ ಎಂದು ಪ್ರಕಟಣೆ ಹೇಳಿದೆ.
ಭಾರತೀಯ ಮತ್ತು ಅಂತಾರಾಷ್ಟ್ರೀಯ ಬ್ಯೂಟಿ ಮತ್ತು ವೆಲ್‍ನೆಸ್ ಬ್ರ್ಯಾಂಡ್‍ಗಳನ್ನು ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆಯಲಿದೆ. ಇದಲ್ಲದೇ, ನೆಕ್ಸಸ್ ಮಾಲ್‍ಗಳಲ್ಲಿ ಖ್ಯಾತನಾಮ ಮೇಕ್-ಅಪ್ ಕಲಾವಿದರು, ಸೌಂದರ್ಯ ಪರಿಣಿತರು ಮತ್ತು ಬ್ಲಾಗರ್‍ಗಳು ಖುದ್ದು ಹಾಜರಿದ್ದು ಉತ್ಸಾಹಿಗಳಿಗೆ ಅತ್ಯಾಕರ್ಷಕವಾದ ಅನುಭವವನ್ನು ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ