ಕರಾವಳಿಯಲ್ಲಿ ಸ್ವಿಗ್ಗಿ ವಿಸ್ತರಣೆ

Upayuktha
0


ಮಂಗಳೂರು/ಉಡುಪಿ: ತಿಂಡಿ ತಿನಿಸುಗಳನ್ನು, ಊಟವನ್ನು ರೆಸ್ಟಾರೆಂಟ್‍ಗಳಿಂದ ಗ್ರಾಹಕರು ಇದ್ದಲ್ಲಿಗೆ ತಲುಪಿಸುವ ಸ್ವಿಗ್ಗಿ, ಕರಾವಳಿಯ ಎರಡು ನಗರ ಸೇರಿದಂತೆ ಕರ್ನಾಟಕದ ಏಳು ನಗರಗಳಿಗೆ ಹೊಸದಾಗಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿರುವುದಾಗಿ ಪ್ರಕಟಿಸಿದೆ.


ರಾಜ್ಯದ ಜನರಲ್ಲಿ ತಿಂಡಿ ತಿನಿಸುಗಳ ಬಗ್ಗೆ ಇರುವ ಪ್ರೀತಿ ಹಾಗೂ ಅಭಿರುಚಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ ಸ್ವಿಗ್ಗಿ ಕಂಪನಿಯು ತನ್ನ ಸೇವೆಗಳನ್ನು ಕುಂದಾಪುರ, ಕೋಟೇಶ್ವರ, ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕಲಬುರ್ಗಿ, ಹಾವೇರಿ ಮತ್ತು ಶಿರಸಿ ನಗರಗಳಲ್ಲಿ ವಿಸ್ತರಿಸುತ್ತಿದೆ ಎಂದು ಕಂಪನಿಯ ಆಹಾರ ಮಾರುಕಟ್ಟೆ ವಿಭಾಗದ ರಾಷ್ಟ್ರೀಯ ಬ್ಯುಸಿನೆಸ್ ಹೆಡ್ ಸಿದ್ಧಾರ್ಥ ಭಾಕೂ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಹೊಸದಾಗಿ ಸೇವೆಯನ್ನು ಒದಗಿಸುತ್ತಿರುವ ನಗರಗಳಲ್ಲಿ ಸ್ವಿಗ್ಗಿ ಕಂಪನಿಯು ಒಟ್ಟು ಐದು ಸಾವಿರಕ್ಕೂ ಹೆಚ್ಚಿನ ರೆಸ್ಟಾರೆಂಟ್‍ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. 'ಸ್ವಿಗ್ಗಿ ಒನ್' ಸದಸ್ಯರು ಉಚಿತ ಡೆಲಿವರಿ, ಬೇಡಿಕೆ ಹೆಚ್ಚಿರುವ ಅವಧಿಯಲ್ಲಿಯೂ ಹೆಚ್ಚುವರಿ ಶುಲ್ಕ ಪಾವತಿಯ ಹೊರೆ ಇಲ್ಲದಿರುವುದು ಹಾಗೂ ವಿಶೇಷ ಕೊಡುಗೆಗಳ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ಹೇಳಿದೆ.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top