ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಕಲಕ್-2023

Upayuktha
0


ಮಂಗಳೂರು: ಪಾಂಡೇಶ್ವರದ  ಶ್ರೀನಿವಾಸ  ವಿಶ್ವವಿದ್ಯಾಲಯದಲ್ಲಿ ಇನ್ಸಿಟ್ಯೂಟ್ ಆಫ್ ಪೋರ್ಟ್‌, ಶಿಪ್ಪಿಂಗ್ ಆಂಡ್ ಲಾಜಿಸ್ಟಿಕ್ ಮ್ಯಾನೇಜ್ಮೆಂಟ್ ವತಿಯಿಂದ ಕಲಕ್-2023 ಸೆ. 6ರಂದು ನಡೆಯಿತು.


ಶ್ರೀನಿವಾಸ  ವಿಶ್ವವಿದ್ಯಾಲಯದ ಉಪಕುಲಪತಿ ಡಾ ಪಿ.ಎಸ್. ಐತಾಳ್ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಶುಭ ಹಾರೈಸಿದರು . ಈ ಸಂದರ್ಭದಲ್ಲಿ ಇನ್ಸಿಟ್ಯೂಟ್ ಆಫ್ ಪೋರ್ಟ್‌, ಶಿಪ್ಪಿಂಗ್‌ ಅಂಡ್ ಲಾಜಿಸ್ಟಿಕ್ ಮ್ಯಾನೇಜ್ಮೆಂಟ್ ಡೀನ್ ಡಾ. ಸೋನಿಯಾ ನೊರೋನ್ಹ, ಇನ್ಸಿಟ್ಯೂಟ್ ಆಫ್ ಕಾಮರ್ಸ್‌ ಅಂಡ್ ಮ್ಯಾನೇಜ್ಮೆಂಟ್ ಡೀನ್ ಪ್ರೊ. ವೆಂಕಟೇಶ್ ಅಮೀನ್, ಪೋರ್ಟ್ ಆಂಡ್ ಶಿಪ್ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ.ನೆಲ್ಸನ್‌  ಪಿರೇರಾ, ಎಂಬಿಎ ವಿಭಾಗದ ಎಚ್ ಒಡಿ ಪ್ರೊ.ಸಾಗರ್ ಸೇರಿದಂತೆ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. 


ವಿದ್ಯಾರ್ಥಿಗಳ ಕೈಯಲ್ಲರಳಿದ ಪೂಕಳಂ, ಉದ್ಘಾಟನೆ ಬಳಿಕ ನಡೆದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಚೆಂಡೆ ವಾದನ, ಹಗ್ಗ ಜಗ್ಗಾಟ ಎಲ್ಲರ ಗಮನ ಸೆಳೆಯಿತು. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top