ಈ ಜಗತ್ತಿನಲ್ಲಿ ಮಾತಾಡುವ ಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಯಾವ ಪ್ರಾಣಿ ಪಕ್ಷಿ ಜೀವಿಗಳಿಗೆ ಸಹ ಮಾತಾಡುವ ಯೋಚಿಸುವ ಶಕ್ತಿ ಇರುವುದಿಲ್ಲ. ಹಾಗೆಯೇ ಮಾತಾಡುವ ಶಕ್ತಿ ಮಾನವರಿಗೆ ಇದೆ. ಯೋಚಿಸಿ ಮಾತಾಡಬೇಕು. ಒಂದು ಮಾತಿನಿಂದ ಎಷ್ಟೋ ಸಂಬಂಧವನ್ನು ಉಳಿಸಬಹುದು ಹಾಗೂ ಒಂದು ಮಾತಿನಿಂದ ಸಂಬಂಧವನ್ನು ಕೆಡಬಹುದು. ಇತ್ತೀಚೆಗೆ ಮಾತೇ ಒಂದು ಉದ್ಯೋಗವಾಗಿದೆ. ಅದೆಷ್ಟು ಜನ ಮಾತಿನಲ್ಲಿ ಜನರನ್ನು ಮರಳು ಮಾಡುತ್ತಾರೆ. ಕೆಲವೊಮ್ಮೆ ನಮಗೆ ತೋಚಿದ್ದನ್ನು ನಾವು ಹೇಳಿಬಿಡುತ್ತೇವೆ. ಇದರ ಪರಿಣಾಮವನ್ನು ನಾವು ಯೋಚಿಸುವುದಿಲ್ಲ. ನಾನು ಹೇಳಿದೆ ಸರಿ ಎಂದು ನಾವು ಯಾವತ್ತೂ ಅಂದುಕೊಳ್ಳಬಾರದು. ಕೆಲವರಿಗೆ ಕೆಲವರ ಮಾತು ಕೇಳಿದಾಗ ಇನ್ನೂ ಕೇಳುವ ಅಂತ ಆಗುತ್ತದೆ ಅವರನ್ನು ಬೇಗ ಸ್ನೇಹ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಕೆಲವರ ಮಾತು ಕೇಳಿದಾಗ ಒಮ್ಮೆ ಮುಗಿಸಲಿ ಅಂತ ಆಗುತ್ತದೆ. ನಮ್ಮ ಮಾತಿನಲ್ಲಿ ಹಿಡಿತ ಇರಬೇಕು ಯೋಚಿಸಿ ಮಾತಾಡಿದರೆ ತಾನು ಗೆಲುವನ್ನು ಸಾಧಿಸಬಹುದು.
ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತು ತುಂಬಾ ಪ್ರಸಿದ್ದಿಯನ್ನು ಪಡೆದಿದೆ. ಒಮ್ಮೆ ಹಾಡಿದ ಮಾತು ಮತ್ತೆ ಅಷ್ಟ ಪಕ್ಕನೇ ಹಿಂಪಡೆಯಲು ಸಾಧ್ಯವಿಲ್ಲ. ನಾವು ಗುಂಪಿನಲ್ಲಿ ಮಾತಾಡುವಾಗ ಅಥವಾ ತಮಾಷೆ ಮಾಡುವಾಗ ಇನ್ನೊಬ್ಬರಿಗೆ ಚುಚ್ಚುವ ರೀತಿ ಇರಬಾರದು. ಅತಿಯಾದರೆ ಅಮೃತವೂ ವಿಷವೆಂಬಂತೆ ನಮ್ಮ ಮಾತು ನಿಯಂತ್ರಣ ತಪ್ಪಿ ಹೋದರೆ ನಮ್ಮ ಜೀವನದ ವ್ಯಕ್ತಿತ್ವಕ್ಕೆ ಮುಳ್ಳಾಗಬಹುದು. ಇದಕ್ಕಾಗಿ ಹಿರಿಯರು ಗಾದೆ ರಚಿಸಿದರೆ ಮಾತು ಬೆಳ್ಳಿ ಮೌನ ಬಂಗಾರ ಕೆಲವು ಸಂದರ್ಭದಲ್ಲಿ ಮಾತು ಎಷ್ಟು ಒಳ್ಳೆಯದು ಅಷ್ಟೇ ಮೌನ ಕೂಡ ಒಳ್ಳೆಯದು. ಮೌನಕ್ಕೆ ಅದೆಷ್ಟು ಸಂಬಂಧವನ್ನು ಉಳಿಸುವ ಸಾಮರ್ಥ್ಯವಿದೆ.
- ಜಯಶ್ರೀ ಸಂಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ