ಸೆ.16: ರಂಗಚಂದಿರ 'ಏಕವ್ಯಕ್ತಿ ನಾಟಕೋತ್ಸವ' ರವೀಂದ್ರ ಕಲಾಕ್ಷೇತ್ರದಲ್ಲಿ

Upayuktha
0




ಬೆಂಗಳೂರು: ರಂಗ ಚಂದಿರ ಮತ್ತು ಥಿಯೇಟರ್ ಥೆರಪಿ ಆಯೋಜಿಸಿರುವ, ನಾಟಕಕಾರ ಡಾ. ಬೇಲೂರು ರಘುನಂದನ್ ಅವರ "ಏಕವ್ಯಕ್ತಿ ನಾಟಕೋತ್ಸವ" 2023 ಮಹಿಳಾ ಸ್ವಾತಂತ್ರ್ಯ- ಸಮಾನತೆ- ಅಭಿವ್ಯಕ್ತಿ- ಈ ಶೀರ್ಷಿಕೆ ಅಡಿಯಲ್ಲಿ ಸೆ.16ರಂದು ಸಂಜೆ 5 ಗಂಟೆಯಿಂದ ಮೌಂಟ್ ಕಾರ್ಮಲ್ ಕಾಲೇಜ್ ಮಕ್ಕಳಿಂದ ರಂಗಗೀತೆಗಳ ಮೂಲಕ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.


ಈ ನಾಟಕೋತ್ಸವ ಉದ್ಘಾಟನೆ ಹಿರಿಯರು ವಿದ್ವಾಂಸರಾದಂತ ಡಾ. ಕಮಲಾ ಹಂಪನಾ ಅವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಲೇಖಕಿಯರಾದ ಡಾ. ವಿಜಯಮ್ಮ ವಹಿಸಲಿದ್ದಾರೆ. ಈ ನಾಟಕೋತ್ಸವದಲ್ಲಿ "ಅಧಿ ನಾಯಕಿ" ನಾಟಕದ ಕಲಾವಿದೆಯಾದ ಎಂ.ಎಸ್ ಲಕ್ಷ್ಮಿ ಕಾರಂತ್ ಮತ್ತು "ಮಾತಾ" ನಾಟದ ಕಲಾವಿದರಾದ ಅರುಣ್ ಕುಮಾರ್ ಅವರಿಗೆ ರಂಗ ಗೌರವ 2023 ಪುರಸ್ಕಾರವನ್ನು ಹಿರಿಯ ಕವಿಯತ್ರಿ ಶ್ರೀಮತಿ ಲಲಿತಾ ಸಿದ್ದ ಬಸವಯ್ಯ ಪ್ರದಾನ ಮಾಡಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಡಾ. ನಿರ್ಮಲಾ. ಸಿ.ಯಲಿಗಾರ್, ಶ್ರೀಮತಿ ವಸಂತ ಕವಿತಾ, ಆರ್ ಲಕ್ಷ್ಮೀದೇವಿ, ಲಯನ್ ಲಲಿತಾ ಶೇಷಾದ್ರಿ, ಡಾ. ಎಂಎಸ್ ವಿದ್ಯಾ, ಗೌರಿ ದತ್ತು, ಎಚ್ ಆರ್ ಸುಜಾತ, ಡಾ. ಪಿ ಚಂದ್ರಿಕಾ, ಡಾ. ವತ್ಸಲ ಮೋಹನ, ಲಲಿತ ಶ್ರೀನಿವಾಸ್, ಲಯನ್ ಶೋಭಾ ಶ್ರೀನಿವಾಸ್, ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಬೇಲೂರು ರಘುನಂದನ್ ರಚನೆ ನಿರ್ದೇಶನದ "ಅಧಿ ನಾಯಕಿ" ಮತ್ತು ಪದ್ಮಶ್ರೀ ಡಾ. ಮಾತಾ ಮಂಜಮ್ಮ ಜೋಗತಿ ಅವರ ಜೀವನ ಆಧಾರಿತ "ಮಾತಾ" ನಾಟಕ ಪ್ರದರ್ಶನಗಳು ನಡೆಯಲಿದೆ ಎಂದು ರಂಗ ಚಂದಿರ ಕಾರ್ಯದರ್ಶಿ ಜಿಪಿಓ ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 9113081894.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top