ಅಂಬಿಕಾದಲ್ಲಿ ಶಿಕ್ಷಕರ ದಿನಾಚರಣೆ

Upayuktha
0

ಪುತ್ತೂರು: ವಿದ್ಯಾರ್ಥಿಗಳ ಅಂತಃಕರಣದ ಪ್ರೀತಿ ಗೌರವಗಳ ಅನಾವರಣ ಶಿಕ್ಷಕರ ದಿನವಾಗಿದೆ. ಪ್ರಿಯ ಶಿಷ್ಯರ ಸಂಭ್ರಮಾಚರಣೆ ನೋಡಿದಾಗ ನಮ್ಮ ಹೆಮ್ಮೆಯ ಭಾರತ ದೇಶ ಉನ್ನತಿಯೆದಡೆಗೆ ಸಾಗುವುದು ಖಂಡಿತಾ. ಭಾರತೀಯ ಪರಂಪರೆಯಲ್ಲಿ ಗುರುವೇ ಸರ್ವವು. ಗುರುಗಳನ್ನು ಮರೆಯಬೇಡಿ, ಗುರುಗಳನ್ನು ಪ್ರೀತಿಸಿ. ಗುರು ದ್ವೇಷಿಯಾದರೆ ಹಾನಿ ತಪ್ಪದು. ಗುರುವಿನ ಭಕ್ತಿ, ಪ್ರೀತಿಗೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ನಟ್ಟೋಜ ಪೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಹೇಳಿದರು. ಅವರು ಅಂಬಿಕಾ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುಗಳ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಉಪನ್ಯಾಸಕರು ಸ್ವರಚಿತ ಕವನವಾಚನ, ಸಂಗೀತ, ಯಕ್ಷಗಾನದ ಹಾಡು, ಇನ್ನಿತರ ಪ್ರತಿಭಾ ಕಾರ್ಯಕ್ರಮದಿಂದ ವಿದ್ಯಾರ್ಥಿಗಳನ್ನು ರಂಜಿಸಿದರು. ವಿದ್ಯಾರ್ಥಿಗಳು ಭಾಷಣ, ಹಾಡು ಮುಂತಾದವುಗಳಿಂದ ಗುರುಗಳಿಗೆ ಗೌರವ ಸೂಚಿಸಿದರು ಹಾಗೂ ಕಿರುಕಾಣಿಕೆ ನೀಡಿ ಗೌರವಿಸಿದರು.


ನಟ್ಟೋಜ ಪೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ. ಎಸ್. ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಉಪ ಪ್ರಾಚಾರ್ಯರಾದ ಶೈನಿ. ಕೆ ಹಾಗೂ ಎಲ್ಲಾ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಕೇಶ್ ಪ್ರಭು ಸ್ವಾಗತಿಸಿ, ನಿಶಾಂತ್ ವಂದಿಸಿದರು, ಶಮಂತ್ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top