ಪೇಜಾವರ ಶ್ರೀಗಳ ಚಾತುರ್ಮಾಸ್ಯ ವ್ರತ: ನೂರಾರು ಮಕ್ಕಳಿಂದ ಸಾಮೂಹಿಕ ಗೀತಾ ಪಠಣ

Upayuktha
0


ಮೈಸೂರು: ಪೇಜಾವರ ಶ್ರೀಗಳ 36ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಮೈಸೂರು ಶ್ರೀ ಕೃಷ್ಣಧಾಮದಲ್ಲಿ ಮಂಗಳವಾರ ನೂರಾರು ವಿದ್ಯಾರ್ಥಿಗಳಿಂದ ಸಾಮೂಹಿಕ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಅತ್ಯಂತ ಸುವ್ಯವಸ್ಥಿತವಾಗಿ ನಡೆಯಿತು.


ಶ್ರೀ ಪೇಜಾವರ ಮಠದ ಅಧೀನದ ಶ್ರೀ ವಿಜಯವಿಠಲ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಸ್ಥಳೀಯ 9 ಶಾಲೆಗಳ ನೂರಾರು ಮಕ್ಕಳು ಏಕಕಂಠದಿಂದ ಭಗವದ್ಗೀತಾ ಪಾರಾಯಣ ನಡೆಸಿ ಇಡೀ ಸಭಾಂಗಣದಲ್ಲಿ ದೈವೀ ವಾತಾರವರಣವನ್ನು ನಿರ್ಮಿಸಿದರು.


ಶ್ರೀ ಪಾದರು ಈ ಸತ್ರವನ್ನು ಜ್ಯೋತಿ ಬೆಳಗಿನ ಉದ್ಘಾಟಿಸಿ ಗೀತಾ ಸಂದೇಶವನ್ನು ಬೋಧಿಸಿದರು. ಚಾತುರ್ಮಾಸ್ಯ ಸಮಿತಿ ಪ್ರಮುಖರಾದ ಉದ್ಯಮಿ ಎಂ‌ ಕೆ ಪುರಾಣಿಕ್, ವಿಜಯವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಾಸುದೇವ ಭಟ್, ಯೋಗಶಿಕ್ಷಕ ರಾಘವೇಂದ್ರ ಪೈ ಮೊದಲಾದವರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top