WIZ NATIONAL SPELL BEE : ಮುಕುಂದ ಕೃಪಾ ಶಾಲೆಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ 46 ನೇ ರ‍್ಯಾಂಕ್‌

Upayuktha
0


ಮಣಿಪಾಲ: ಮಣಿಪಾಲದ ಖ್ಯಾತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಕಾಡಮಿ ಆಫ್ ಜನರಲ್ ಎಜುಕೇಷನ್ (AGE) ನ ಮುಕುಂದ ಕೃಪಾ ಶಾಲೆಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಯವರು WIZ NATIONAL SPELL BEE ರಾಷ್ಟ್ರಮಟ್ಟದಲ್ಲಿ ನಡೆಸಿದ 14 ನೇ ರಾಷ್ಟ್ರೀಯ ಮೆಗಾ ಫೈನಲ್ (2022-23)  ಕ್ಲಾಸ್ 7 ವಿಭಾಗದಲ್ಲಿ ರಾಷ್ಟ್ರಮಟ್ಟದ 46 ನೇ ರ‍್ಯಾಂಕ್‌ ಗಳಿಸಿದ್ದಾರೆ. ಪ್ರಸ್ತುತ ಅಕಾಡಮಿಯ ಉಡುಪಿ ಕುಂಜಿಬೆಟ್ಟುನಲ್ಲಿರುವ ಟಿ ಎ ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.


7ನೇ ತರಗತಿ ವಿಭಾಗದಲ್ಲಿ ಉಡುಪಿ ಜಿಲ್ಲೆಯಿಂದ ರ‍್ಯಾಂಕ್‌ ಪಡೆದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.


ಮುಕುಂದ ಕೃಪಾ ಶಾಲೆ ತನ್ನ ಸುವರ್ಣ ಮಹೋತ್ಸವದ ಆಚರಿಸುವ  ಸುಸಂದರ್ಭದಲ್ಲಿ, ಶಾಲೆಯ ಇತಿಹಾಸದಲ್ಲಿ ರಾಷ್ಟ್ರೀಯ ಮೆಗಾ ಫೈನಲ್‌ನಲ್ಲಿ ರ‍್ಯಾಂಕ್ ಗಳಿಸಿದ ಮೊದಲ ವಿದ್ಯಾರ್ಥಿ ಕೀರ್ತಿಗೆ ಭಾಜಕರಾಗಿದ್ದಾರೆ.


ಶಾಲೆಯ ಮುಖ್ಯೋಪಾದಾಯಿನಿ, ಶಿಕ್ಷಕರು, ಶಿಕ್ಷಕ ರಕ್ಷಕ ಸಂಘ, ಹಳೆವಿದ್ಯಾರ್ಥಿ ಸಂಘ ಮತ್ತು ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top