ಮಂಗಳೂರು: ವೇಗವಾಗಿ ಬೆಳೆಯುತ್ತಿರುವ ಸ್ವತಂತ್ರ ಆರೋಗ್ಯ ವಿಮಾ ಕಂಪನಿಗಳಲ್ಲಿ ಒಂದಾದ ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶುರೆನ್ಸ್, ಕರ್ನಾಟಕದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ವಿಮಾ ಜಾಗೃತಿಯನ್ನು ಉತ್ತೇಜಿಸಲು ಉದ್ದೇಶಿಸಿದೆ.
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‍ಡಿಎ) ದಿಂದ ಕರ್ನಾಟಕದಲ್ಲಿ ರಾಜ್ಯ ವಿಮಾ ಜಾಗೃತಿ ಯೋಜನೆಯಡಿ ಮಂಗಳೂರಿನಲ್ಲಿ ಆರೋಗ್ಯ ವಿಮಾ ಜಾಗೃತಿ ಅಭಿಯಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರಿನ ಕೆಎಂಸಿ ಆಸ್ಪತ್ರೆ ಮತ್ತು ಕಾರ್‍ಸ್ಟ್ರೀಟ್‍ನಲ್ಲಿರುವ ಸುಧೀಂದ್ರ ಡಯಾಗ್ನೋಸ್ಟಿಕ್ ಸೆಂಟರ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಿತ್ರನಟ ಮತ್ತು ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 9 ರ ವಿಜೇತ ರೂಪೇಶ್ ಶೆಟ್ಟಿ ಅತಿಥಿಗಳಾಗಿದ್ದರು.
ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶೂರೆನ್ಸ್‍ನ ರಾಜ್ಯ ವಿಮಾ ಯೋಜನೆ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಇಂಡಿಯಾ ಪ್ರಾಜೆಕ್ಟ್ ಲೀಡ್ ಸಪ್ನಾ ದೇಸಾಯಿ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಜಾನ್ ರಾಮಾಪುರಂ, ಡಾ. ಶೀತಲ್ ರಾಜ್ ಎಂ ಮತ್ತು ಮಂಗಳೂರು ಅತ್ತಾವರ ಕೆಎಂಸಿದ ಬೆನ್ನುಮೂಳೆ ವಿಭಾಗದ ತಜ್ಞ ಡಾ. ವೈಶಾಕ್ ಬಿ. ಭಟ್ ಭಾಗವಹಿಸಿದ್ದರು. ಆರೋಗ್ಯ ತಪಾಸಣಾ ಶಿಬಿರದ ಸಮಯದಲ್ಲಿ, ವ್ಯಕ್ತಿಗಳು ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸಲು, ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಮತ್ತು ಸರಿಯಾದ ಆರೋಗ್ಯ ವಿಮಾ ಯೋಜನೆಯನ್ನು ಆಯ್ಕೆ ಮಾಡುವ ಬಗ್ಗೆ ಮಾರ್ಗದರ್ಶನ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ