ಬೆಂಗಳೂರು: ‘ಇದು ನಿಜಕ್ಕೂ ಪ್ರಧಾನಿ ಮೋದಿಯವರು ನುಡಿದಂತೆ ಅಮೃತ ಕಾಲ. ಭಾರತದ ತಂತ್ರಜ್ಞರಿಗೆ ಹಾಗೂ ವಿಜ್ಞಾನಿಗಳಿಗೆ ಸುವರ್ಣಾವಕಾಶಗಳು ಲಭಿಸಲಿವೆ. ಕಲಿಕೆ, ಸಂಶೋಧನೆ, ಹೊಸ ಹೊಸ ವಿಚಾರಗಳ ಅನ್ವೇಷಣೆಗಳಿಗೆ ಭಾರತ ಸರ್ಕಾರ ಅಪರಿಮಿತ ಪ್ರೋತ್ಸಾಹ ನೀಡುತ್ತಿದೆ. ಈ ಡಿಜಿಟಲ್ ಯುಗದಲ್ಲಿ ತೆರೆಮರೆಗೆ ಸರಿಯುತ್ತಿರುವ ಕೋರ್ ಇಂಜಿನಿಯರಿಂಗ್ ಭಾಗಗಳಾದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಸಿವಿಲ್ ಕೋರ್ಸ್‍ಗಳಿಗೆ ಉತ್ತೇಜನ ನೀಡುವ ಸಲುವಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಅಧಿಕೃತವಾಗಿ ಪ್ಲೇಸ್‍ಮೆಂಟ್ ಪೋರ್ಟಲ್ ಅನ್ನು ತೆರೆದಿದೆ. ಈ ಮೂಲಕ ಕೋರ್ ಇಂಜಿನೀಯರಿಂಗ್ ಪದವೀಧರರಿಗೆ ಉದ್ಯೋಗ ಲಭ್ಯತೆಯ ಮಾಹಿತಿ ದೊರೆಯುತ್ತದೆ. ದೇಶದ ಅಭಿವೃದ್ದಿಗೆ ಕೋರ್ ಇಂಜಿನಿಯರಿಂಗ್‍ನ ಕೊಡುಗೆ ನಿಜಕ್ಕೂ ನಿರಂತರ. ನಾವು ಭಾರತವನ್ನು ಮತ್ತಷ್ಟು ಕಟ್ಟಬೇಕು, ವಿಶ್ವಗುರುವಾಗಿಸಬೇಕು. ಈ ನಿಟ್ಟಿನಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿರುವ ಈ ಸಮ್ಮೇಳನ ನಿಜಕ್ಕೂ ಅರ್ಥಪೂರ್ಣ’, ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ( J.L.¹.n.E) ಅಧ್ಯಕ್ಷ ಡಾ. ಟಿ.ಜಿ. ಸೀತಾರಾಂ ನುಡಿದರು. ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, L.E.E.E ಬೆಂಗಳೂರು ಸಹಯೋಗದಲ್ಲಿ, J.L.¹.n.E ಪ್ರಾಯೋಜಿತ ‘ಅಂತರ್ಜಾಲ, ಬಹು ಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನ’ ಕುರಿತ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಶ್ರೀಯುತರು - ‘ನಮ್ಮ ಭಾರತ ಇತ್ತೀಚೆಗೆ ಚಂದ್ರಯಾನ-3ರ ಯಶಸ್ಸಿನಿಂದ ಚಂದ್ರನ ಮೇಲೆ ತನ್ನ ಕುರುಹನ್ನು ಸ್ಥಾಪಿಸಿದೆ. ಈಗಾಗಲೇ ಜಗತ್ತಿನ ಐದನೇ ಮಹತ್ವದ ಆರ್ಥಿಕ ಸಬಲತೆಯ ರಾಷ್ಟ್ರ ಎಂದು ಪ್ರಸಿದ್ಧಿ ಪಡೆದಿರುವ ಭಾರತ ಇನ್ನು ಮೂರು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರುವುದರಲ್ಲಿ ಯಾವ ಸಂಶಯವೂ ಇಲ್ಲ. ಚಂದ್ರಯಾನ-3ರಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳ ಕಾಣಿಕೆ ದೊಡ್ಡದು. ಅದೇ ರೀತಿ ನಮ್ಮ ಮಹಿಳಾ ವಿಜ್ಞಾನಿಗಳ ಪಾಲ್ಗೊಳ್ಳುವಿಕೆ ಎಲ್ಲ ಕ್ಷೇತ್ರಗಳಲ್ಲೂ ಇದೆ. ಇದು ಅಭಿಮಾನ ಪಡುವ ಸಂಗತಿ’, ಎಂದರು.
ಸ್ಪೈನ್ ದೇಶದ ಮ್ಯಾಡ್ರಿಡ್‍ನ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಡೇವಿಡ್ ಕಮಾಚೊ ಮಾತನಾಡಿ, ‘ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅನ್ವೇಷಣೆಗಳ ನಿರಂತರ ವಿನಿಯಮ ಏರ್ಪಡಬೇಕು’, ಎಂದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ತಂತ್ರಜ್ಞಾನ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು.
ಅಮೇರಿಕಾದ L.E.E.E ಅಧ್ಯಕ್ಷ ಥಾಮಸ್ ಕೌಗ್ಲಿನ್, ಅಮೇರಿಕಾ L.E.E.E ಕಂಪ್ಯೂಟರ್ ಸೊಸೈಟಿ ಅಧ್ಯಕ್ಷೆ ಜ್ಯೋತಿಕಾ ಅತಾವಲೆ, ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ವಿನಯ ಹೆಗ್ಡೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ, ನಿಟ್ಟೆ ಶಿಕ್ಷಣ ಸಂಸ್ಥೆಯ ಅಕಾಡೆಮಿಕ್ ನಿರ್ದೇಶಕ ಡಾ. ಸಂದೀಪ ಶಾಸ್ತ್ರಿ, ಆಡಳಿತಾಧಿಕಾರಿ ರೋಹಿತ್ ಪೂಂಜ, ಡೀನ್ ಡಾ. ವಿ. ಶ್ರೀಧರ್, ಸಮ್ಮೇಳನದ ಆಯೋಜನೆಯ ಹೊಣೆ ಹೊತ್ತಿದ್ದ ಡಾ. ರಾಮಚಂದ್ರ ಎ.ಸಿ, ಡಾ. ಪರಮೇಶಾಚಾರಿ, ಡಾ. ಕರುಣಾಕರ ರೈ ಹಾಗೂ ಜಗತ್ತಿನಾದ್ಯಂತ ನಿಬಂಧಗಳನ್ನು ಮಂಡಿಸಲು ಬಂದಿದ್ದ 150 ತಂತ್ರಜ್ಞರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ