ಚಿರಂತನ ಸನಾತನ - ಸನಾತನ ಧರ್ಮ ವಿರೋಧಿಸುವವರಿಗೆ ಕೆಲವು ಪ್ರಶ್ನೋತ್ತರಗಳು

Upayuktha
0


ಳೆದ ಕೆಲವು ದಿನಗಳಿಂದ ಕೆಲವು ರಾಜಕಾರಣಿಗಳಿಂದ ಸನಾತನ ಧರ್ಮವನ್ನು  ಅತ್ಯಂತ ಹೀನಾಯವಾಗಿ ಟೀಕಿಸಲಾಗುತ್ತಿದೆ. ತಮಿಳುನಾಡಿನ ದ್ರಮುಕ ಪಕ್ಷದ ಕ್ರೀಡಾ ಸಚಿವ ಹಾಗೂ ಮುಖ್ಯಮಂತ್ರಿಯ ಪುತ್ರ ಉದಯನಿಧಿ ಸ್ಟಾಲಿನ್ `ಸನಾತನ ಧರ್ಮವಿರೋಧಿ ಸಮ್ಮೇಳನದಲ್ಲಿ’ ಮಾತನಾಡುವಾಗ `ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾದಂತಿದ್ದು, ಅದರ ಉಚ್ಚಾಟನೆಯಾಗಬೇಕು’ ಎಂದು ಟೀಕಿಸಿದ್ದಾರೆ. ತದನಂತರ ತಮಿಳುನಾಡಿನ ದ್ರಮುಕ ಪಕ್ಷದ ಸಂಸದ ಎ.ಕೆ. ರಾಜಾ, ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ, ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ, ಚಲನಚಿತ್ರ ನಟ ಕಮಲ್ ಹಾಸನ ಮತ್ತು ಪ್ರಕಾಶ್ ರಾಜ ಮುಂತಾದ ಮಹಾಶಯರ ಗುಂಪು ಉದಯನಿಧಿ ಹೇಳಿಕೆಗೆ ತಮ್ಮ ತಾಳ ಸೇರಿಸಿದರು. ವಾಸ್ತವದಲ್ಲಿ ಈ `ಹೇಟ್ ಸ್ಪೀಚ್’ ಮಾಡಿದ್ದಕ್ಕಾಗಿ ಉದಯನಿಧಿ ಮತ್ತು ಅವರಂತಹ ಮಹಾಶಯರನ್ನು ಜೈಲಿಗೆ ಅಟ್ಟಬೇಕಿತ್ತು. ಆದರೆ ದುರದೃಷ್ಟವಶಾತ್ ಅವರ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಥಾತ್, ಸನಾತನ ಧರ್ಮದಲ್ಲಿ, ‘ಕರ್ಮ ಸಿದ್ಧಾಂತ'ವಿದೆ. ಹಾಗಾಗಿ ಮಾಡುವ ಪ್ರತಿಯೊಂದು ಕರ್ಮದ ಫಲ ಎಂದಾದರೂ ಅನುಭವಿಸಲೇಬೇಕಾಗುವುದು.


 ‘ಸನಾತನ’ವು ಅವಿನಾಶಿ ತತ್ತ್ವ :

ಸನಾತನ ಪದದ ಉತ್ಪತ್ತಿಯು ‘ಸನ ಆತನೋತಿ ಇತಿ ಸನಾತನಃ.' ಎಂದಾಗಿದೆ. ಸನಾ ಎಂದರೆ ಶಾಶ್ವತ ಮತ್ತು ಆತನೋತಿ ಎಂದರೆ ಪ್ರಾಪ್ತಿ ಮಾಡಿಕೊಡುವಂತಹದ್ದು. ‘ಸನಾತನ' ಎಂದರೆ ಯಾವುದು ಶಾಶ್ವತೆಯನ್ನು ಪ್ರಾಪ್ತಿ ಮಾಡಿಕೊಡುವುದೋ ಅದು ಎಂದರ್ಥ.‘ಸನಾತನೊ ನಿತ್ಯನೂತನ:' ಎಂದರೆ ಯಾವುದು ಶಾಶ್ವತವೋ, ಅನಾದಿಯಾಗಿದ್ದರೂ ನಿತ್ಯನೂತನ ಅಂದರೆ ಎಂದೆಂದಿಗೂ ಅದು ಹಳೆಯದಾಗುವುದಿಲ್ಲವೋ, ಅದನ್ನು‘ಸನಾತನ' ಎಂದು ಕರೆಯಲಾಗುತ್ತದೆ. ಸನಾತನವು ಅವಿನಾಶಿ ತತ್ತ್ವವಾಗಿದೆ. ಮಹಾಭಾರತದ ಶಾಂತಿ ಪರ್ವದ ಅಧ್ಯಾಯ 64 ರಲ್ಲಿ ಅನಾದಿಕಾಲದಲ್ಲಿ ಈಶ್ವರನು ವಿಶ್ವದ ಉತ್ಪತ್ತಿ ಮಾಡಿದಾಗಲೇ ಧರ್ಮವನ್ನೂ ನಿರ್ಮಿಸಿದನು. ಅನಾದಿ ಮತ್ತು ಅನಂತವಾದ ಧರ್ಮವನ್ನು ಕೊನೆಗಾಣಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಿಲ್ಲ; ಏಕೆಂದರೆ ಉತ್ಪತ್ತಿ-ಸ್ಥಿತಿ-ಲಯದ ನಿಯಮವು ಧರ್ಮಕ್ಕೆ ಅನ್ವಯವಾಗುವುದಿಲ್ಲ. ಯುಗಯುಗಗಳಿಂದಲೂ ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧ ನಡೆಯುತ್ತಿದೆ ಮತ್ತು ಇದರಲ್ಲಿ ಅಂತಿಮ ವಿಜಯ ಸತ್ಯದ್ದೇ ಆಗಿರುತ್ತದೆ. ಅರ್ಥಾತ್ ಸನಾತನ ಧರ್ಮದ್ದೇ ಆಗುತ್ತದೆ. ಇದಕ್ಕೆ ಇತಿಹಾಸವೇ ಸಾಕ್ಷಿಯಿದೆ. ಇದೇ ಶಾಶ್ವತ ಸತ್ಯವಾಗಿದೆ. ಆದುದರಿಂದ ಮುಂಬರುವ ಕಾಲದಲ್ಲಿ ಸನಾತನ ಧರ್ಮದ ಉಚ್ಛಾಟನೆಯಾಗುವುದೋ, ಸನಾತನ ವಿರೋಧಿ ದ್ರಮುಕ ಪಕ್ಷವೋ ಎನ್ನುವುದರ ಉತ್ತರವನ್ನು ಕಾಲವೇ ನೀಡಲಿದೆ.


 ಹಿಂದುತ್ವದ ಸೂರ್ಯ ಉದಯಿಸುತ್ತಿದ್ದಾನೆ :

ಸ್ಟಾಲಿನ್ ನ ಹೇಳಿಕೆ ಬಂದ ಕೂಡಲೇ ಧರ್ಮದ್ವೇಷಿ ಬಾಲಂಗೋಚಿಗಳು ಒಬ್ಬರ ಹಿಂದೊಬ್ಬರು ಹಿಂದೂ ಧರ್ಮದ ವಿರುದ್ಧ ಹೇಳಿಕೆಯನ್ನು ನೀಡಿದರು. ಕೆಲವು ವರ್ಷಗಳ ಹಿಂದೆ, ‘ಧರ್ಮವು ಅಫೀಮಿನ ಗುಳಿಗೆಯಾಗಿದೆ', ‘ದೇವರಿಗೆ ನಿವೃತ್ತಿ ನೀಡಿರಿ’ ಎನ್ನುವಂತಹ ಹೇಳಿಕೆಗಳನ್ನು ನೀಡಲಾಗಿತ್ತು. ಈ ಹೇಳಿಕೆಗಳೆಂದರೆ, ಹಿಂದೂ ಧರ್ಮದ ವಿರುದ್ಧ  ನಡೆಯುವ `ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಈ ಅಂತರರಾಷ್ಟ್ರೀಯ ಷಡ್ಯಂತ್ರದ್ದೇ ಭಾಗವಾಗಿದೆ ಮೊಗಲ ದಾಳಿಕೋರರು ಬಳಸಿದ ಭಾಷೆಯನ್ನೇ ಇಂದು ಸ್ಟಾಲಿನ್ ಮತ್ತು ಓವೈಸಿಯವರು ಬಳಸುತ್ತಿದ್ದಾರೆ. ಸನಾತನ ಹಿಂದೂ ಧರ್ಮವನ್ನು ವಿರೋಧಿಸುವ ಪ್ರಯತ್ನವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದರೂ, ಇಂದು ಕೊರೊನಾ ಬಳಿಕ ಜಗತ್ತಿನಾದ್ಯಂತ ಹಿಂದೂ ಧರ್ಮದ ವಿಷಯದಲ್ಲಿ ಆಕರ್ಷಣೆ ಹೆಚ್ಚುತ್ತಿದೆ. ಸನಾತನ ಜೀವನಶೈಲಿಯನ್ನು ಅಂಗೀಕರಿಸುವ ಪ್ರಮಾಣವೂ ಹೆಚ್ಚುತ್ತಿದೆ. ಯಾವ ರೀತಿ ಸೂರ್ಯೋದಯದ ಸಮಯ ನಿಧಾನವಾಗಿ ಹತ್ತಿರ ಬರುತ್ತದೆಯೋ, ಹಾಗೆ ವಾತಾವರಣದ ಅಂಧಕಾರವೂ ಕಡಿಮೆಯಾಗುತ್ತದೆ. ಇದೂ ಹಾಗೆಯೇ ಇದೆ. ಉದಯನಿಧಿ ಅಥವಾ ಎ. ರಾಜಾ ಇವರು ಎಷ್ಟೇ ಬಾಯಿ ಬಡಿದುಕೊಂಡರೂ, ಇಂದು ಜಾಗತಿಕ ಮಟ್ಟದಲ್ಲಿ ಹಿಂದುತ್ವದ `ಡಿಸಮೆಟಲಿಂಗ್’ ಅಲ್ಲ ಬದಲಾಗಿ ಹಿಂದುತ್ವದ ಸೂರ್ಯೋದಯವಾಗುತ್ತಿದೆ. ಇದೇ ವಾಸ್ತವವಾಗಿದೆ.


 ಇತ್ತೀಚೆಗಷ್ಟೇ ಭಾರತದಲ್ಲಿ `ಜಿ-20’ ಸಮ್ಮೇಳನ ಶೃಂಗ ಸಭೆ ನಡೆಯಿತು. ಆ ಸಮಯದಲ್ಲಿ ಭಾರತಕ್ಕೆ ಬಂದಿದ್ದ ಬ್ರಿಟನ್ ಪ್ರಧಾನಮಂತ್ರಿ ಋಷಿ ಸುನಕ್ ಇವರು ಸಪತ್ನೀಕರಾಗಿ ಅಕ್ಷರಧಾಮ ಮಂದಿರಕ್ಕೆ ಭೇಟಿ ನೀಡಿದರು. ನಾನು ಹಿಂದೂ ಮತ್ತು ಭಾರತೀಯ ಮೂಲದವನಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಈ ಸಮ್ಮೇಳನದಲ್ಲಿ ಆಹ್ವಾನಿತ ಅನೇಕ ವಿದೇಶಿ ಮಹಿಳೆಯರು ಪಾರಂಪಾರಿಕ ಹಿಂದೂ ಉಡುಗೆಯಾಗಿರುವ ಸೀರೆಯನ್ನು ಧರಿಸಿದ್ದರು. ಅಮೇರಿಕೆಯಲ್ಲಿ ಮುಂಬರುವ ರಾಷ್ಟ್ರಾಧ್ಯಕ್ಷರ ಹುದ್ದೆಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಉಮೇದುವಾರನಾಗಿರುವ ಭಾರತೀಯ ವಂಶದ ರಾಮಸ್ವಾಮಿಯವರೂ ಹಿಂದೂ ಧರ್ಮದ ಬಗ್ಗೆ ಶ್ರದ್ಧೆಯನ್ನು ವ್ಯಕ್ತಪಡಿಸಿದ್ದಾರೆ. ಹಿಂದೂ ಧಾರ್ಮಿಕ ಪದ್ಧತಿಯಂತೆ ಅವರು ತಮ್ಮ ದೈನಂದಿನ ದಿನಚರಿಯನ್ನು ಆಚರಿಸುತ್ತಿರುವುದಾಗಿ ಹೇಳಿದ್ದಾರೆ. ಇದೇ ತಿಂಗಳಿನಲ್ಲಿ ಅಮೇರಿಕೆಯ ಲೂಯಿಸ್ ವಿಲ್ಹೆ ನಗರದ ಮಹಾಪೌರರು ಸಪ್ಟೆಂಬರ್ ೩ `ಸನಾತನ ಧರ್ಮ ದಿನ’ ಎಂದು ಘೋಷಿಸಿದ್ದಾರೆ. ವಿದೇಶದ ಜನರು ಹಿಂದೂ ಧರ್ಮವನ್ನು ಆಚರಿಸುತ್ತಿದ್ದಾರೆ. ಹಾಗೆಯೇ ಭಾರತದಲ್ಲಿ ಆಸ್ತಿಕರೂ ಹೆಚ್ಚುತ್ತಿದ್ದಾರೆ. 2019-20 ರಲ್ಲಿ ಭಾರತದಲ್ಲಿ ನಡೆಸಿದ ಸಂಶೋಧನೆಯ ಆಧಾರದಲ್ಲಿ `ಪ್ಯು ರಿಸರ್ಚ ಸೆಂಟರ’ ನ ವರದಿ ಪ್ರಕಟವಾಯಿತು. ಅದರಲ್ಲಿ  ಶೇ. 80 ರಷ್ಟು ಜನರು ಹಿಂದೂ ದೇವತೆಗಳ ಮೇಲೆ ಶ್ರದ್ಧೆಯನ್ನಿಡುತ್ತಾರೆ. ಶೇ. 55 ರಷ್ಟು ಹಿಂದೂಗಳ ಮನೆಗಳಲ್ಲಿ ದಿನನಿತ್ಯವೂ ಪೂಜೆ ಮಾಡುತ್ತಾರೆ’ ಎಂದು ಕಂಡು ಬಂದಿದೆ. ಯೋಗ, ಆಯುರ್ವೇದ, ಸಂಸ್ಕೃತ ಭಾಷೆ ಈ ವಿಷಯದಲ್ಲಿಯೂ ಜಗತ್ತಿನಾದ್ಯಂತ ಆಕರ್ಷಣೆ ಹೆಚ್ಚುತ್ತಿದೆ.


 ತಮಿಳುನಾಡಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿರಿ!

ಉದಯನಿಧಿ ಸ್ವತಃ ಕ್ರಿಶ್ಚಿಯನ್ ಎಂದು ಹೇಳಿಕೊಳ್ಳುತ್ತಾರೆ ಮತ್ತು ಸನಾತನ ಧರ್ಮಕ್ಕೆ ಹೆಸರಿಡುತ್ತಾರೆ. ಬಹುತೇಕವಾಗಿ ಹಿಂದೂ ಧರ್ಮದ ಪ್ರಭಾವ ಎಲ್ಲೆಡೆ ಹೆಚ್ಚುತ್ತಿರುವುದೇ ಉದಯನಿಧಿಯವರ ಅಸ್ವಸ್ಥತೆ ಹಾರಣವಾಗಿರಬಹುದು. ಸನಾತನ ಧರ್ಮ ಸಮಾಜದ ಪ್ರತಿನಿಧಿಯಾಗಿ ಒಂದು ವಿಷಯ ಹೇಳಬೇಕೆನಿಸುತ್ತದೆ, ಉದಯನಿಧಿಯವರಿಗೆ ಅಂದರೆ ತಮಿಳುನಾಡಿನಲ್ಲಿ ಆಡಳಿತಾರೂಢ ಪಕ್ಷಕ್ಕೆ ಸನಾತನ ಧರ್ಮ ಒಪ್ಪಿಗೆಯಿಲ್ಲದಿರುವಾಗ ಅವರು ಅಲ್ಲಿ ಸನಾತನ ಧರ್ಮದ ಆಧಾರಶಿಲೆಯಂತಿರುವ ದೇವಸ್ಥಾನಗಳ ಮೇಲಿನ ಹಕ್ಕನ್ನು ಬಿಟ್ಟುಕೊಡಬೇಕು. ಅವರು ತಮಿಳುನಾಡಿನಲ್ಲಿರುವ ಎಲ್ಲ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸುವುದಾಗಿ ಘೋಷಿಸಬೇಕು.


`ಹೇಟ್ ಸ್ಪೀಚ್’ ಮೇಲೆ ಯಾರು ಕ್ರಮ ಕೈಗೊಳ್ಳುವರು ?

ನಮ್ಮ ದೇಶದಲ್ಲಿ ದುರ್ದೈವದಿಂದ ‘ಸನಾತನ ಧರ್ಮಕ್ಕೆ ಹೆಸರಿಡಿರಿ’ ಅಥವಾ `ಸನಾತನ ಧರ್ಮದವರನ್ನು ಉಚ್ಛಾಟನೆ ಮಾಡಿರಿ’ ಅಥವಾ ಸನಾತನ ಧರ್ಮದ ಉಚ್ಛಾಟನೆಗಾಗಿ `ಸರ್ ತನ್ ಸೆ ಜುದಾ’ ಈ ರೀತಿ ಬಹಿರಂಗವಾಗಿ ಘೋಷಣೆ ನೀಡಿದಾಗಲೂ ಅಂಥವರ ಮೇಲೆ ‘ಹೇಟ್ ಸ್ಪೀಚ್’ ‌ಎಂದು ಪೊಲೀಸರು ಕ್ರಮ ಕೈಗೊಂಡಿಲ್ಲ ಅಥವಾ ನ್ಯಾಯಾಲಯದ ಸರ್ವೋಚ್ಚ ಸಂಸ್ಥೆ ಸುಮೊಟೊ ಕ್ರಮ ಕೈಗೊಳ್ಳುವ ಧೈರ್ಯ ತೋರಿಸುವುದಿಲ್ಲ. `ಸೆಕ್ಯುಲರಿಸಂ’ (ಜಾತ್ಯಾತೀತತೆ) ಉಪದೇಶ ನೀಡುವ ಉದಾರಮತವಾದಿಗಳಿಗೆ ಒಂದೇ ಒಂದು ಪ್ರಶ್ನೆಯಿದೆ. ಹಿಂದೂ ಧರ್ಮದ ವಿರುದ್ಧ  ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದರಿಂದ ಭಾರತದಲ್ಲಿರುವ `ಸೆಕ್ಯುಲಿರಸಂ’ (ಜಾತ್ಯಾತೀತತೆ) ಹೇಗೆ ಅಪಾಯಕ್ಕೀಡಾಗುವುದಿಲ್ಲ ?


`We the people’  ಅಂದರೆ `ನಾವು ನಾಗರಿಕರು’  ಭಾರತೀಯ ಸಂವಿಧಾನದ ಮೂಲ ಧ್ಯೇಯವಾಗಿರುವಾಗ ಅರ್ಥಾತ್ ಬಹುಸಂಖ್ಯಾತ ಹಿಂದೂ ಸಮಾಜವು ಸನಾತನಿ ಆಗಿರುವಾಗ, ಭಾರತದ ಸಂವಿಧಾನ ಹೇಗೆ ಅಪಾಯಕ್ಕೀಡಾಗಿಲ್ಲ? ವಾಸ್ತವದಲ್ಲಿ ಉದಯನಿಧಿಯವರ ಹೇಳಿಕೆಯೆಂದರೆ ಒಂದು ರೀತಿಯಲ್ಲಿ ಸನಾತನ ಧರ್ಮದ ಹಿಂದೂಗಳನ್ನು ನಿರ್ನಾಮ ಮಾಡಲು  ಪ್ರಚೋದಿಸುವ ಹೇಳಿಕೆಯಾಗಿದೆ. ಆದರೆ ಉದಯನಿಧಿಯವರ ಈ `ಹೇಟ್ ಸ್ಪೀಚ್’ ಮೇಲೆ ಯಾರು ಕ್ರಮ ಕೈಗೊಳ್ಳುವರು. ಇದೇ ಪ್ರಶ್ನೆ ಈಗ ಸನಾತನಿ ಸಮಾಜದ ಮನಸ್ಸಿನಲ್ಲಿ  ಮೂಡುತ್ತಿದೆ. ಇನ್ನುಳಿದಂತೆ ಸನಾತನ ಧರ್ಮದ ಉಚ್ಛಾಟನೆಯ ಬಗ್ಗೆ ಹೇಳುವುದಾದರೆ, ಸನಾತನ ಧರ್ಮ ಚಿರಂತನವಾಗಿದೆ. ಅವಿನಾಶಿಯಾಗಿದೆ. ‘ಕಾಗೆಯ ಶಾಪದಿಂದ ಹಸು ಸಾಯುವುದಿಲ್ಲ’ ಹಾಗೆಯೇ ಯಾರದೇ ದ್ವೇಷದ ಹೇಳಿಕೆಯಿಂದ ಸನಾತನ ಧರ್ಮ ಕೊನೆಗೊಳ್ಳುವುದಿಲ್ಲ. ಇದು ನಮ್ಮ ಧರ್ಮಶ್ರದ್ಧೆಯಾಗಿದೆ.

-ಚೇತನ ರಾಜಹಂಸ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top