ಬೆಳ್ತಂಗಡಿ: ಜಾನಪದ ತಜ್ಞರು, ನಾಡೋಜ ಪ್ರಶಸ್ತಿ ಪುರಸ್ಕೃತರು, ಡಾ.ಗೊ.ರು. ಚನ್ನಬಸಪ್ಪ ನಾಮಾಂಕಿತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಸರಕಾರೀ ಪದವಿ ಪೂರ್ವ ಕಾಲೇಜು ನಡ ಇಲ್ಲಿನ ರೇಂಜರ್ಸ್ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಗಳಿಸಿ ಸರಕಾರೀ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದ ಏಕೈಕ ಸರಕಾರೀ ಸಂಸ್ಥೆ ಇದಾಗಿರುತ್ತದೆ. ರೇಂಜರ್ ಲೀಡರ್ ಶ್ರೀಮತಿ ವಸಂತಿ ಪಿ. ಇವರ ನೇತೃತ್ವದಲ್ಲಿ, ಶ್ರೀಮತಿ ಲಿಲ್ಲಿ ಪಿ.ವಿ. ಇವರ ಮಾರ್ಗದರ್ಶನದಲ್ಲಿ, ಪ್ರಾಂಶುಪಾಲರಾದಿಯಾಗಿ ಎಲ್ಲಾ ಉಪನ್ಯಾಸಕರ ಸಹಕಾರದಲ್ಲಿ ಈ ಸಾಧನೆ ಸಾಧ್ಯವಾಗಿದೆ. ಸವಿತಾ, ಪ್ರಾಪ್ತಿ, ಯಕ್ಷಿತಾ, ನಿಖಿತಾ, ನಿಶ್ಮಿತಾ, ಶ್ವೇತಾ ಗಾಯನದಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ