ಬೆಳೆ ಸರ್ವೆ ಆ್ಯಪ್‌ನ ಮಿಸ್‌ಮ್ಯಾಚಿಂಗ್ ವಿಸ್ತೀರ್ಣ ಸಮಸ್ಯೆಯ ವಿಸ್ತೃತ ಗೊಂದಲಗಳು!

Upayuktha
0


ಬೆಳೆ ಸರ್ವೆಗಳನ್ನು ಮಾಡಿಕೊಳ್ಳಲು ಈ ಬಾರಿ ರೈತರಿಗೆ ಮಾಹಿತಿ/ಪ್ರಚಾರ ಕೊಡದೆ, PR ಗಳೇ ಸರ್ವೆ ಮಾಡುವಂತೆ ಮಾಡಲಾಗಿದೆ. ಆ್ಯಪ್‌ನ್ನು ಮಾಡಿಫೈ ಮಾಡಿ ರೈತರ ಬೆಳೆ ಪ್ರದೇಶದ ವಿಸ್ತೀರ್ಣ ಮಿಸ್‌ಮ್ಯಾಚ್ ಆಗುವಂತೆ ಮಾಡಲಾಗಿದೆ. ಇನ್ಷ್ಯೂರೆನ್ಸ್ ಕಂಪನಿಗಳಿಂದ ರೈತರಿಗೆ ಮಿಸ್‌ಮ್ಯಾಚಿಂಗ್ ಮಾಹಿತಿಗಳು ಬರುತ್ತಿವೆ.  PRಗಳೋ, ಅಥವಾ ಇನ್ಯಾರೋ ಮಾಡಿದ ತಪ್ಪನ್ನು 15.09.23 ರ ಒಳಗೆ ಸರಿಪಡಿಸಲು ರೈತರಿಗೇ ಸೂಚಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಳೆ ಸರ್ವೆ ಆ್ಯಪ್ ಗೊಂದಲಗಳ ಸರಮಾಲೆ ಆಗಿದೆ.  


ಗೊಂದಲಗಳ ಕರ್ಮಕಾಂಡಗಳ ಪಟ್ಟಿ ಹೀಗಿವೆ!!:


1) ಇಂತಹ ಬೆಳೆ ವಿಸ್ತೀರ್ಣ ಮಿಸ್ ಮ್ಯಾಚಿಂಗ್ ಪ್ರಾಕ್ಟಿಕಲ್ ಸಮಸ್ಯೆ ಬಗ್ಗೆ ಸಾಮಾನ್ಯ ರೈತರಿಗೆ ಮೊದಲೇ ಯಾಕೆ ಸಂಬಂಧಿಸಿದ ಅಧಿಕಾರಿಗಳು ಹೇಳುವುದಿಲ್ಲ?


2) ಬೆಳೆ ಸರ್ವೇ ಮಾಡಬೇಕಾದರೆ ತೋಟದಲ್ಲಿ ನಿಜವಾಗಿ ಇರುವ ಮರ ಗಿಡಗಳ ಲೆಕ್ಕ ಕೊಡಬೇಕಲ್ವಾ?  ಹಳೇ ಅಡಿಕೆ ತೋಟದಲ್ಲಿ ಎಕರೆಗೆ 800-900 ಮರಗಳೂ ಇರುತ್ತವೆ, ಕಾಫಿಯಲ್ಲೂ ಹಾಗೇ ಇರಬಹುದು.  ಆ್ಯಪ್‌ನಲ್ಲಿ ವಿಸ್ತೀರ್ಣ ಮ್ಯಾಚ್ ಮಾಡುವುದಕ್ಕೆ 'ಒಟ್ಟಾರೆ ಮರಗಳ ಲೆಕ್ಕ' ಎಂಟ್ರಿ ಮಾಡುವ ಅಸಂಬದ್ದ ಏಕೆ?  ಆ ಕಾಲಂ ಆದರೂ ಏಕೆ? ಒಟ್ಟಾರೆ ಮರದ ಲೆಕ್ಕದ ಎಂಟ್ರಿ ಮಾಡಿದರೆ ಅದ್ಯಾವ ಪರಿಯ ಸರ್ವೆ?  ಆ ಸರ್ವೆಯ ಅಸಂಬದ್ದ ಅಂಕಿಸಂಖ್ಯೆ ಇಟ್ಕೊಂಡು ಏನು ಸಾಧನೆ ಮಾಡಬೇಕಿದೆ?


3) ಈ ರೀತಿ ಮರಗಳ 'ಒಟ್ಟಾರೆ ಕಲ್ಪಿತ ಮರದ ಲೆಕ್ಕವನ್ನು' ಎಂಟ್ರಿ ಮಾಡಲು PR ಗಳಿಗೆ ಟ್ರೈನಿಂಗ್ ಕೊಡಲಾಗಿದೆಯಾ? 


4) ಈ ರೀತಿ 'ಒಟ್ಟಾರೆ ಕಲ್ಪಿತ ಮರದ ಲೆಕ್ಕವನ್ನು' ಎಂಟ್ರಿ ಮಾಡಲು ರೈತರಿಗೆ ಸಂಬಂಧಿಸಿದ ಅಧಿಕಾರಿಗಳು ಪೂರ್ವ ಮಾಹಿತಿ ಕೊಟ್ಟಿಲ್ಲ ಏಕೆ?


5) ಎಲ್ಲೋ ಕುಳಿತು PRಗಳು ಬೆಳೆ ಸರ್ವೆ ಮಾಡುವ ಆಪ್ಷನ್ ಇರುವುದು ವ್ಯವಸ್ಥೆಯೇ ಅಸಂಬದ್ದ ಅಲ್ವಾ?


6) ಒಟ್ಟಾರೆ ಕಲ್ಪಿತ ಮರದ ಲೆಕ್ಕವನ್ನು' ಎಂಟ್ರಿ ಮಾಡಿ, ಅದರ ಆಧಾರದ ಮೇಲೆ ರೈತರ ತೋಟದ ತಪ್ಪು ವಿಸ್ತೀರ್ಣ ನಾಳೆ ಪಹಣಿ, ಮ್ಯುಟೇಷನ್‌ಗಳಿಗೆ ಫ್ಲೋ ಆದರೆ ಆಗುವ ಸಮಸ್ಯೆಗಳಿಗೆ ಯಾರು ಜವಾಬ್ದಾರರು?  ಪರಿಣಾಮ ಲೋನು, ಇನ್ಷ್ಯೂರೆನ್ಸ್ ಪರಿಹಾರ ಅಥವಾ ಯಾವುದೇ ವ್ಯವಹಾರಕ್ಕೆ ರೈತರಿಗೆ ತೊಂದರೆ ಆದರೆ ಯಾರನ್ನು ಕೇಳಬೇಕು.


7) ಅಡಿಕೆ ತೋಟದ ಬೆಳೆ ಸರ್ವೆ ಬಗ್ಗೆ ತೋಟಗಾರಿಕೆಯಲ್ಲಿ ವಿಚಾರಿಸಬೇಕಾ? ಕೃಷಿ ಇಲಾಖೆಯಲ್ಲಾ?


8) ಆ್ಯಪ್‌ನಲ್ಲಿ ತಪ್ಪು ಮಾಹಿತಿಗಳು ಎಂಟ್ರಿ ಆದಾಗ ಅದನ್ನು ತಿದ್ದುಪಡಿ ಮಾಡುವುದಕ್ಕೆ ಪಹಣಿ, ಫೋಟೊ, ಆಧಾರ್, ರೇಷನ್ ಕಾರ್ಡ್, ಅರ್ಜಿ, ಬ್ಯಾಂಕ್ ಪಾಸ್ ಬುಕ್ಕು, ಫ್ರುಟ್ ID ಎಲ್ಲ ಹಿಡ್ಕೊಂಡು ರೈತರು ಇಲಾಖೆಗಳ ಬಾಗಿಲಿಗೆ ಅಲೆಯಬೇಕಾ?


9) ಅಷ್ಟಕ್ಕೂ ದೀರ್ಘಾವದಿ ಬೆಳೆಗಳಾದ ಅಡಿಕೆ ಕಾಫಿಗಳನ್ನು ಪ್ರತೀ ವರ್ಷ ಸರ್ವೆ ಮಾಡುವ ವ್ಯರ್ಥ ಕೆಲಸಗಳೇಕೆ? ಆ್ಯಪ್ ಬದಲಿಸಲು ಸಾಧ್ಯವಿಲ್ಲವೆ? ಅದು ಮನುಷ್ಯನೇ ಮಾಡಿದ ಆ್ಯಪ್ ಅಲ್ವಾ?


10) "ಬೆಳೆ ವಿಮೆ ಪಾವತಿಸಿರುವ ರೈತರ ಬೆಳೆಯ ಮಿಸ್ ಮ್ಯಾಚ್ ಇದ್ದಲ್ಲಿ ಆಯಾ ರೈತರಿಗೆ ವಿಮಾ ಕಂಪನಿಯಿಂದ ಮುಂಗಾರು ಬೆಳೆ ಸಮೇಕ್ಶೆ ಆಪ್ ನ ಲಿಂಕ್ ಉಳ್ಳ ಮೆಸೇಜ್ ಆಯ ರೈತರ ಮೊಬೈಲ್‌ ಗೆ ಈಗಾಗಲೇ ಬಂದಿದ್ದು. 

ಇದರ ಅನ್ವಯ ಕೆಳಗೆ ನಮೂದಿಸಿರುವ ಆಪ್ ಅನ್ನು download ಮಾಡಿಕೊಂಡು ತಮ್ಮ ಬೆಳೆ ಸಮೀಕ್ಶೆಯನ್ನು  ಸೆಪ್ಟೆಂಬರ್ 15 ರ ಒಳಗಾಗಿ ಮಾಡಕೊಳ್ಳಬೇಕಾಗಿ ತಿಳಿಸಿದೆ.

https://play.google.com/store/apps/details?id=com.csk.farmer23_24.cropsurvey


ಈ ಮೆಸೇಜ್ ಸಂಬಂಧಿಸಿದ PRಗಳಿಗೆ, VA ಗಳಿಗೆ, ತೋಟಗಾರಿಕೆ/ಕೃಷಿ ಅಧಿಕಾರಿಗಳಿಗೆ ಹೋಗುವಂತೆ ಮಾಡಿ, ಮಿಸ್‌ಮ್ಯಾಚ್ ಸರಿ ಪಡಿಸಬಹುತ್ತಿಲ್ವಾ? 

ಕೆಲವು ರೈತರಿಗೆ ಇದು ಅರ್ಥ ಆಗದೇ ಸುಮ್ಮನಿದ್ದುಬಿಡಬಹುದು, ನೆಟ್ವರ್ಕ್ ಇಲ್ಲದ ಹಳ್ಳಿಯಲ್ಲಿ ರೈತರಿಗೆ ಇದನ್ನು ಮಾಡುವುದಕ್ಕೆ ಆಗದೇ ಇರಬಹುದು. ಆ್ಯಂಡ್ರಾಯ್ಡ್ ಫೋನ್ ರೈತರ ಬಳಿ ಇಲ್ಲದೇ ಇರಬಹುದು? ಮೆಸೇಜ್ ನೋಡದೇ ಇರಬಹುದು. 


11) ಇನ್ಷ್ಯೂರೆನ್ಸ್ ಕಟ್ಟದ ರೈತರಿಗೆ ಮೇಲಿನ (No..10 above) ಇನ್ಷ್ಯೂರೆನ್ಸ್ ಕಂಪನಿ ಮೆಸೇಜ್ ಬಾರದೇ ಇದ್ದರೆ, ಮಿಸ್‌ಮ್ಯಾಚಿಂಗ್ ಮಾಹಿತಿ ಹಾಗೆ ಉಳಿದು ಹೋದರೆ?


12) ಸರಿ ಮಾಡಿಸಿಕೊಳ್ಳಲು ಇನ್ನು ಏಳೇ ದಿನ ಸಮಯ ಇರುವುದು (15.09.23 ರ ಒಳಗೆ). ಅಷ್ಟರಲ್ಲಿ ಈ ಗೊಂದಲಗಳು ಮುಗಿಯುತ್ತವಾ? ಸದಾ ಡೌನ್ ಆಗಿರುವ ಸರಕಾರಿ ಸರ್ವರ್ ಗಳು ಅಪ್ ಆಗಿ ಸಪೋರ್ಟ್ ಮಾಡಬಹುದಾ? ನೆಟ್ವರ್ಕ್ ಸಿಗಬಹುದಾ? ಇಷ್ಟರ ಮಧ್ಯ ಎಲೆಚುಕ್ಕಿ/ಕೊಳೆಗೆ ಔಷಧಿ ಹೊಡೆಯುವ ಕೆಲಸ ಬೇರೆ ಇದೆ. ಯಾವುದು ಮೊದಲು ಮಾಡುವುದು!!?


13) ಆ್ಯಪ್‌ನಲ್ಲಿ ಮಿಸ್‌ಮ್ಯಾಚಿಂಗ್ ವಿಸ್ತೀರ್ಣ ಮಾಹಿತಿಯನ್ನು ಮೊದಲು ಆ್ಯಪ್‌ನಲ್ಲಿ ಆಕ್ಷೇಪಣೆ ಬಟನ್ ಒತ್ತಬೇಕು.  ಬಹುಶಃ VA ಅದನ್ನು ಅಕ್ಸೆಪ್ಟ್ ಮಾಡಬೇಕು. ನಂತರ ಮಿಸ್‌ಮ್ಯಾಚಿಂಗ್ ಸರಿಪಡಿಸಬೇಕು.  ನಾನು ಆಕ್ಷೇಪಣೆ ಬಟನ್ ಒತ್ತಿ ಮೂರು ದಿನ ಆಗಿದೆ. ಇನ್ನೂ ಕ್ಲಿಯರ್ ಆಗಿಲ್ಲ.  ಏನು ಮಾಡುವುದು?


- ಅರವಿಂದ ಸಿಗದಾಳ್, ಮೇಲುಕೊಪ್ಪ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top