ಕುಂಬಳೆ: ಗೋಕರ್ಣದ ಅಶೋಕೆಯಲ್ಲಿ ಶನಿವಾರ (ಸೆ.9) ಜರಗಿದ ಯುವ ಸಮಾವೇಶದಲ್ಲಿ ನಡೆದ 'ಬೆಂಕಿ ಇಲ್ಲದೆ ಅಡುಗೆ' ಸ್ಪರ್ಧೆಯಲ್ಲಿ ಮಹಾಮಂಡಲ ವ್ಯಾಪ್ತಿಯ ಒಟ್ಟು 35 ತಂಡಗಳ ನೊಂದಾವಣೆಗಳಲ್ಲಿ 23 ತಂಡಗಳು ಭಾಗವಹಿಸಿದ್ದು, ಈ ಸ್ಪರ್ಧೆಯಲ್ಲಿ ಮುಳ್ಳೇರಿಯ ಮಂಡಲ ಗುಂಪೆ ವಲಯದ ತಂಡ 50ಕ್ಕೂ ಹೆಚ್ಚು ವೈವಿಧ್ಯಮಯ ಅಡುಗೆಗಳನ್ನು ತಯಾರಿಸಿ ಪ್ರಥಮ ಸ್ಥಾನ ಗಳಿಸಿದೆ.
ಮಾತೃಪ್ರಧಾನೆ ಕಾವೇರಿ ಅಮ್ಮ ಗುಂಪೆ ಹಾಗೂ ರೇವತಿ ಕಕ್ವೆ, ಧರ್ಮತ್ತಡ್ಕ ಇವರು ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ತಂಡದ ಗೆಲುವಿಗೆ ತಂಡದ ಸದಸ್ಯರಾದ ಕೇಶವಪ್ರಸಾದ ಎಡಕ್ಕಾನ, ಶ್ರೀನಿಧಿ ತೆಂಕಕೆರೆ, ವಿಜಯನಾರಾಯಣ ಗುಂಪೆ, ಅಕ್ಷಯ ಶ್ರಾವಣಕೆರೆ ಮತ್ತು ಮಂಡಲ, ವಲಯದ ಮಾತೃ, ಯುವ ಪ್ರಧಾನರಿಗೂ ಮಹಾ ಮಂಡಲ ಯುವ ಪ್ರಧಾನರಾದ ಕೇಶವ ಪ್ರಕಾಶ ಸಂಪೂರ್ಣ ಪ್ರೋತ್ಸಾಹ ಹಾಗೂ ಸಹಕಾರ ನೀಡಿದ್ದರು.
ಬೆಂಕಿ ಇಲ್ಲದೆ ತಯಾರಿಸುವ ಅಡುಗೆಗಳಾದ ವಿವಿಧ ಬಗೆಯ ಚಟ್ನಿ, ಉಪ್ಪಿನಕಾಯಿ, ತಂಬುಳಿ, ಅವಲಕ್ಕಿ, ಚರುಮುರಿ, ಪಾನೀಯ, ರಸಾಯನ, ಕೋಸಂಬರಿಗಳನ್ನು ಮಾಡಲಾಗಿತ್ತು.
-ಭಾಗ್ಯಲಕ್ಷ್ಮಿ ಎಡಕ್ಕಾನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ