ಬೆಂಗಳೂರು: ಇಸ್ಕಾನ್ ಸನ್ನಿಧಿಯಲ್ಲಿ ಗೀತಾ ಭಕ್ತಿಗಾಯನ

Upayuktha
0


ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲಿ ಸೆಪ್ಟೆಂಬರ್ 7, ಗುರುವಾರ ಸಂಜೆ ಉದಯೋನ್ಮುಖ ಗಾಯಕಿ  ಗೀತಾ ಭತ್ತದ್ ಅವರು ನಡೆಸಿಕೊಟ್ಟ ಭಕ್ತಿ ಸಂಗೀತದ ಕಾರ್ಯಕ್ರಮದಲ್ಲಿ ವಿಘ್ನ ನಿವಾರಕನಾದ ಶ್ರೀ ಗಣೇಶನನ್ನು ಸ್ಮರಿಸುವ ಗಜವದನ ಬೇಡುವೆ ಎಂಬ ಕೃತಿಯೊಂದಿಗೆ ಆರಂಭಿಸಿ, ಸ್ವಾಗತಂ ಕೃಷ್ಣ, ಕೃಷ್ಣಯ್ಯ ನೀ ಬಾರಯ್ಯ, ಆಡಿಸಿದಳೆ ಯಶೋದೆ ಇನ್ನೂ ಹಲವಾರು ಕೃತಿಗಳನ್ನು ಪ್ರಸ್ತುತ ಪಡಿಸಿ, ನಂತರ ಅನೇಕ ಭಜನ್ ಗಳನ್ನು ಹಾಡಿ, ನೆರೆದಿದ್ದ ಕಲಾರಸಿಕರ ಮನಸೆಳೆದರು. 


ಇವರೊಂದಿಗೆ ಸಹ-ಗಾಯನದಲ್ಲಿ ಕುಮಾರಿಯರಾದ ರವಳಿ, ರಿತಾನ್ಯ, ಶ್ರಾವಣಿ ಮತ್ತು ವರ್ಷತ ಇವರುಗಳು ದನಿಗೂಡಿಸಿದರು. ಇವರ ಗಾಯನಕ್ಕೆ  ಮಲ್ಲಿಕಾರ್ಜುನ ಪತ್ತರ್ ಕೀಬೋರ್ಡ್ ವಾದನದಲ್ಲಿ ಹಾಗೂ ಸುದರ್ಶನ್ ಅಸ್ಕಿಹಾಳು ತಬಲಾ ವಾದನದಲ್ಲಿ ಸಾಥ್ ನೀಡಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top