ಕಲಿಕೆಯಲ್ಲಿ ಬದುಕಿನ ಅರ್ಥ ಕಂಡುಕೊಳ್ಳಿ : ಡಾ.ಕುರಿಯನ್

Upayuktha
0

ಆಳ್ವಾಸ್ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಪ್ರೇರಣಾ ಉಪನ್ಯಾಸ


ವಿದ್ಯಾಗಿರಿ (ಮೂಡುಬಿದಿರೆ): ‘ಕಲಿಕೆಯ ಮೂಲಕ ಬದುಕಿನ ಅರ್ಥ ಕಂಡುಕೊಳ್ಳಬೇಕು. ಆಗ ಯಶಸ್ಸು ನಿಮ್ಮದಾಗುತ್ತದೆ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. 


ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘವು ಸಿಎ ಇಂಟರ್‍ ಮೀಡಿಯೆಟ್ ಹಾಗೂ ಫೌಂಡೇಶ್‍ನ್ ವಿದ್ಯಾರ್ಥಿಗಳಿಗೆ ವಿ.ಎಸ್. ಆಚಾಯ್ ಸಭಾಂಗಣದಲ್ಲಿ ಹಮ್ಮಿಕೊಂಡ ‘ವೃತ್ತಿ ಮಾರ್ಗದರ್ಶನ ಮತ್ತು ಪ್ರೇರಣಾ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


ಬದುಕಿಗೆ ಬದ್ಧತೆ ಇರಲಿ. ಉತ್ತಮ ಪರಿಸರವನ್ನು ನಿರ್ಮಿಸಿಕೊಳ್ಳಿ. ಯಶಸ್ಸು ಸಾಧಿಸಲು ಗುರಿ ಸ್ಥಿರವಾಗಿರಲಿ. ನಿರ್ದಿಷ್ಟ ದಿಕ್ಕಿನೆಡೆಗೆ ಸಾಗಿದಾಗ ಗುರಿ ಸಾಧಿಸಲು ಸಾಧ್ಯ ಎಂದರು. 


ಲೆಕ್ಕ ಪರಿಶೋಧಕರು (ಸಿಎ) ಹಣದ ಲೆಕ್ಕಾಚಾರವನ್ನೇ ಮಾಡಿದರೂ, ಬದುಕಿನಲ್ಲಿ ಹಣ ಗಳಿಕೆಯೇ ಮುಖ್ಯವಾಗಬಾರದು. ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಮುಖ್ಯ ಎಂದರು. 


ಅದ್ವೈತ್ ಲರ್ನಿಂಗ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಪುನರ್ವಸ್ ಜಯಕುಮಾರ್ ಮಾತನಾಡಿ, ಕಲಿಕೆ ಹಾಗೂ ಸಿಎಯ ಮಹತ್ವವನ್ನು ತಿಳಿಸಿದರು. ಜ್ಞಾನವು ನಮ್ಮನ್ನು ಯಶಸ್ಸಿನೆಡೆಗೆ ಹೇಗೆ ಕೊಂಡೊಯ್ಯುತ್ತದೆ ಎಂಬುದನ್ನು ಉದಾಹರಿಸಿಕೊಂಡು ವಿವರಿಸಿದರು.  


ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ವಾಣಿಜ್ಯ ವಿಭಾಗದ ಪ್ರಮತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿನ್ ಕಾರ್ಯಕ್ರಮ ನಿರೂಪಿಸಿ, ಮೇಘನಾ ವಂದಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top