ಅಡ್ಯನಡ್ಕ: ಜನತಾ ಪದವಿಪೂರ್ವ ಕಾಲೇಜು, ಅಡ್ಯನಡ್ಕ ಇದರ ಜನತಾ ದರ್ಪಣ ಸಾಹಿತ್ಯ ಸಂಘ ಮತ್ತು ವನಸಿರಿ ಇಕೋ ಕ್ಲಬ್ ಇವುಗಳ ಸಹಯೋಗದಲ್ಲಿ 2023-24ನೇ ಸಾಲಿನ ಅಂತರ್ ತರಗತಿ ಪ್ರತಿಭಾ ದಿನವು ಸೆಪ್ಟೆಂಬರ್ 2ರಂದು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತಾಧಿಕಾರಿಗಳಾದ ರಮೇಶ್ ಎಂ. ಬಾಯಾರು ಶುಭ ಹಾರೈಸಿದರು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಿ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಸಿರಿ ಇಕೋ ಕ್ಲಬ್ನ ಸಂಯೋಜಕ ಹಾಗೂ ಜೀವಶಾಸ್ತ್ರ ಉಪನ್ಯಾಸಕ ರವಿಕುಮಾರ್ ಎಸ್. ಆರ್, ಜನತಾದರ್ಪಣ ಸಾಹಿತ್ಯ ಸಂಘದ ಸಂಯೋಜಕ ಹಾಗೂ ಹಿಂದಿ ಉಪನ್ಯಾಸಕರಾದ ಸೋಮಶೇಖರ್ ಎಚ್., ಇಕೋ ಕ್ಲಬ್ನ ಅಧ್ಯಕ್ಷರಾದ ಭರತೇಶ್, ಉಪಾಧ್ಯಕ್ಷರಾದ ಶರಣ್ಯ, ಸಾಹಿತ್ಯ ಸಂಘದ ಅಧ್ಯಕ್ಷರಾದ ಮೋಕ್ಷಾ, ಉಪಾಧ್ಯಕ್ಷರಾದ ನಮಿತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅವರು ಬಹುಮಾನಗಳನ್ನು ವಿತರಿಸಿದರು. ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಶಿವಕುಮಾರ್ ಸಾಯ, ಜನತಾ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ಕುಮಾರಿ ಪವಿತ್ರ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಕುಮಾರಿ ಚೈತ್ರ ತೀರ್ಪುಗಾರರಾಗಿದ್ದರು.
ಅತ್ಯುತ್ತಮ ನಿರೂಪಣೆಗಾಗಿ ದ್ವಿತೀಯ ವಿಜ್ಞಾನ ವಿಭಾಗದ ಕುಮಾರಿ ಶರಣ್ಯ ಬಿ ಪ್ರಥಮ ಬಹುಮಾನ, ದ್ವಿತೀಯ ವಾಣಿಜ್ಯ ವಿಭಾಗದ ಪೂಜಾಶ್ರೀ ಅವರು ದ್ವಿತೀಯ ಬಹುಮಾನ ಪಡೆದರು. ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಥಮ ತಂಡ ಪ್ರಶಸ್ತಿ, ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ತಂಡ ಪ್ರಶಸ್ತಿ ಪಡೆದರು. ಕನ್ನಡ ಉಪನ್ಯಾಸಕರಾದ ಶೀನಪ್ಪ ನಾಯ್ಕ್ ಕೆ. ಕಾರ್ಯಕ್ರಮ ನಿರೂಪಿಸಿ, ಗಣಿತಶಾಸ್ತ್ರ ಉಪನ್ಯಾಸಕರಾದ ಗಣೇಶ್ ಕೆ ಆರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ