ಸುಳ್ಯ: ಕರ್ನಾಟಕ ರಾಜ್ಯ ಭಾವೈಕ್ಯತೆ ಪರಿಷತ್ ದಕ್ಷಿಣ ಕನ್ನಡ ಆಯೋಜಿಸಿದ್ದ ರಾಜ್ಯಮಟ್ಟದ ಭಾವೈಕ್ಯತಾ ಕವಿ ಸಮ್ಮಿಲನ ಮತ್ತು ಕವಿಗೋಷ್ಠಿ ಸಮಾರಂಭದಲ್ಲಿ ಸುಳ್ಯದ ಸಾಹಿತಿ, ಜ್ಯೋತಿಷಿ, ಸಂಘಟಕ ಮತ್ತು ಚಿತ್ರ ನಿರ್ದೇಶಕರಾದ ಎಚ್. ಭೀಮರಾವ್ ವಾಷ್ಠರ್ ಅವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಕ್ಬಾಲ್ ಬಾಳಿಲ ಅವರು ಪ್ರದಾನ ಮಾಡಿದರು.
ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ವಿಟ್ಲ, ಸಂಚಾಲಕ ರಾದ ಅಬ್ದುಲ್ ಅಝೀಝ್ ಪುಣಚ, ಡಾ.ಸುರೇಶ ನೇಗಿಲಗುಳಿ, ಎ.ಬಿಎಂ ಕಳಂಜ, ಡಾ. ಮ್ಯಾಕ್ಸಿಮ್ ಡಿಸೋಜಾ, ಮಹಮ್ಮದ್ ಹಾಜಿ ಪರಪ್ಪು ಇನ್ನಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ