ಹಳೆಗನ್ನಡ ಕಾವ್ಯ ಕಬ್ಬಿಣದ ಕಡಲೆಯಲ್ಲ: ಡಾ. ಸುಮಾ

Upayuktha
0


ತೆಂಕನಿಡಿಯೂರು:
ಹಳೆಗನ್ನಡ ಕಾವ್ಯ ಕೇವಲ ಹಳೆಯ ಕಾಲಕ್ಕೆ ಮಾತ್ರವಲ್ಲ ಅದು ಇವತ್ತಿಗೂ ಪ್ರಸ್ತುತ.  ಅದು ಕಬ್ಬಿಣದ ಕಡಲೆಯಲ್ಲ ಅದನ್ನು ಓದುವ ಮತ್ತು ಅರ್ಥೈಸಿಕೊಳ್ಳುವ ಕಡೆಗೆ ನಮ್ಮ ಅರಿವನ್ನು ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಉಡುಪಿ ಇಲ್ಲಿನ ಹಿರಿಯ ಉಪನ್ಯಾಸಕಿ ಡಾ. ಸುಮಾ ಅವರು ಅಭಿಪ್ರಾಯಪಟ್ಟರು.  


ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಕಾಲೇಜು ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಜರುಗಿದ “ಕಬ್ಬದುಳುಮೆ” ಹಳೆಗನ್ನಡ ಕಾವ್ಯದೋದು ಕಮ್ಮಟದ ಸಮಾರೋಪ ಹಾಗೂ ದ್ವಿತೀಯ ವರ್ಷದ ಕನ್ನಡ ಎಂ.ಎ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.  


ಕಬ್ಬದುಳುಮೆಯ ರೂವಾರಿ ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್., ಕನ್ನಡ ಸಹಪ್ರಾಧ್ಯಾಪಕರಾದ ಶ್ರೀ ರಾಧಾಕಷ್ಣ ಹಾಗೂ ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲರಾದ ಡಾ. ಪ್ರಸಾದ್ ರಾವ್ ಎಂ. ವಹಿಸಿದ್ದರು.  ವಿದ್ಯಾರ್ಥಿನಿ ಸಂಧ್ಯಾ ಸ್ವಾಗತಿಸಿ, ಸ್ವಾತಿ ವಂದಿಸಿದರು.  ಚೈತ್ರ ಜಿ. ತಿಂಗಳಾಯ ನಿರೂಪಿಸಿದರು.  ಉಪನ್ಯಾಸಕರಾದ ಶ್ರೀಮತಿ ಶರಿತ್ ಕುಮಾರಿ, ಶ್ರೀಮತಿ ಭಾರತಿ, ಶ್ರೀಮತಿ ಶಾಲಿನಿ ಯು.ಬಿ., ಶ್ರೀಮತಿ ಅರ್ಚನಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top