ವಿವಿವಿ ಅರಿವಿನ ಜ್ಯೋತಿ ಹಚ್ಚಲು ಸ್ವರ್ಣಪಾದುಕೆ ಸಂಚಾರ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಭಾರತೀಯತೆಯ ಪುನರುತ್ಥಾನ ಹಾಗೂ ನಮ್ಮ ಕಲೆ- ಸಂಸ್ಕೃತಿಗಳ ಪುನರುಜ್ಜೀವನದ ಧ್ಯೇಯವನ್ನಿಟ್ಟುಕೊಂಡು ಆರಂಭವಾಗಿರುವ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸ್ವರ್ಣಪಾದುಕೆಗಳು ಗೋಕರ್ಣ ಮಂಡಲದ ಎಲ್ಲೆಡೆ ಸವಾರಿ ಕೈಗೊಳ್ಳಲಿವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ನಡೆಯುತ್ತಿರುವ ಸಂಘಟನಾ ಚಾತುರ್ಮಾಸ್ಯದಲ್ಲಿ ಹೆಗಡೆ, ಮೂರುರು-ಕಲ್ಲಬ್ಬೆ ಮತ್ತು ವಾಲಗಳ್ಳಿ ವಲಯಗಳ ಶಿಷ್ಯಭಕ್ತರಿಂದ ಭಿಕ್ಷಾಸೇವೆ ಸ್ವೀಕರಿಸಿ ಅವರು ಶ್ರೀಸಂದೇಶ ಅನುಗ್ರಹಿಸಿದರು.


ಚಾತುರ್ಮಾಸ್ಯದ ಬಳಿಕ ಸ್ವರ್ಣಪಾದುಕೆಗಳ ಸಂಚಾರ ಕುಮಟ ಮಂಡಲದಿಂದ ಆರಂಭವಾಗಲಿದೆ. ಗೋಕರ್ಣ ಮಂಡಲದಾದ್ಯಂತ ಈ ಪುಣ್ಯಪಾದುಕೆಗಳು ಸಂಚರಿಸಲಿದ್ದು, ಇದು ಅರವಿನ ಜ್ಯೋತಿಯನ್ನು ಬೆಳಗಲಿದೆ ಎಂದರು.


ಸ್ವರ್ಣಪಾದುಕೆಗಳ ಪೂಜೆ ನಡೆಯುವ ಎಲ್ಲೆಡೆ ಸಣ್ಣ ವಿವಿವಿ ಜಾಗೃತಿ ಸಭೆಗಳನ್ನು ನಡೆಸಲಾಗುತ್ತದೆ. ಹೀಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಇಂಥ 1800 ಸಭೆಗಳನ್ನು ನಡೆಸಿ ಭಾರತೀಯತೆ, ಗುರುಕುಲ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಗುವುದು. ಪಾದುಕೆಗೆ ಸಮರ್ಪಣೆಯಾಗುವ ಸಮಸ್ತ ಕಾಣಿಕೆ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ನಿರ್ವಹಣೆಗೆ ಬಳಕೆಯಾಗಲಿದೆ ಎಂದು ವಿವರಿಸಿದರು.


ನಮ್ಮ ಪೀಠದ ಪರಂಪರೆ ಸಮಾಜದ ಜೀವರಾಶಿಗಳ ಕಷ್ಟ ಕಾರ್ಪಣ್ಯಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವುದು. ನಮ್ಮದು ಕಾರುಣ್ಯ ಪೀಠ. ಇದನ್ನು ಮೂಲವಾಗಿಟ್ಟುಕೊಂಡು ಮಠದ ಸಮಸ್ತ ಶಿಷ್ಯರು ಸಮಾಜದಲ್ಲಿ ಸಂಕಷ್ಟಕ್ಕೀಡಾದ ಜನತೆಗೆ ತ್ವರಿತವಾಗಿ ಸ್ಪಂದಿಸಬೇಕು. ಸಂಕಷ್ಟಕ್ಕೆ ಸ್ಪಂದಿಸುವುದು ಸಂಘಟನೆಯ ಮೂಲಮಂತ್ರ ಎಂದು ಅಭಿಪ್ರಾಯಪಟ್ಟರು.


ಮನೆ ಮನೆಗಳನ್ನು ತಲುಪಿ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ನಾವು ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚಬೇಕು. ಅಂತೆಯೇ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಸೇವೆ-ಸಾಧನೆಗೆ ಸ್ಫೂರ್ತಿ ನೀಡಬೇಕು ಎಂದು ಕಿವಿಮಾತು ಹೇಳಿದರು.


ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಭಟ್ ಮಾತನಾಡಿ, ಸಮಾಜದ ಉಜ್ವಲ ಭವಿಷ್ಯದ ಉದ್ದೇಶದಿಂದ ಶ್ರೀಸಂಸ್ಥಾನ ಕೈಗೊಂಡಿರುವ ಸಮಸ್ತ ಯೋಜನೆಗಳಿಗೆ ಕೈಜೋಡಿಸುವುದು ಎಲ್ಲ ಶಿಷ್ಯಭಕ್ತರ ಜವಾಬ್ದಾರಿ. ಮಕ್ಕಳಿಗೆ ಎಳವೆಯಿಂದಲೇ ಒಳ್ಳೆಯ ಶಿಕ್ಷಣ ದೊರಕಿದಾಗ ಮಾತ್ರ ಆತ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ದಾಸ್ಯದ ಸಂಕೇತವಾದ ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ಧಿಕ್ಕರಿಸಿ, ಭಾರತೀಯತೆಗೆ ಒತ್ತು ನೀಡುವ ಶಿಕ್ಷಣ ಇಂದಿನ ಅಗತ್ಯ. ಪ್ರಾಚೀನ ಭಾರತೀಯ ಕಲೆ, ಸಂಸ್ಕøತಿಗಳ ಪುನರುತ್ಥಾನದ ಉದ್ದೇಶದಿಂದ ಸ್ಥಾಪನೆಯಾಗಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಬೆಳೆಸುವುದು ಸಮಾಜದ ಕರ್ತವ್ಯ ಎಂದರು.


ಹವ್ಯಕ ಮಹಾಮಂಡಲದ ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಕೋಣಾರೆ, ಕಾರ್ಯದರ್ಶಿ ರವೀಂದ್ರ ಭಟ್ ಸೂರಿ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಾಯ ಅಗ್ನಿಹೋತ್ರಿಗಳು ಮತ್ತು ವಿನಾಯಕ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು. ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. 9 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top