ರಾಮಾಯಣ ಹಕ್ಕಿನೋಟ-22: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0
ಶ್ರೀರಾಮಾಯನಮ:


ಸೀತಾ ರಾಮರ ಮದುವೆಗೆ ಬೇಕಾಗಿರುವ ಕರೆಯ ಒಸಗೆಯೊಡನೆ ಬಂದ ಜನಕರಾಜನ ಪ್ರತಿನಿಧಿಗಳು ಜನಕನ ಸಂದೇಶವನ್ನು ಗೌರವಪೂರ್ವಕವಾಗಿ ಸಲ್ಲಿಸಿದರು.ದಶರಥನು ಗುರುಗಳಾದ ವಸಿಷ್ಠ ವಾಮದೇವರು ಮತ್ತು ಸಚಿವರೊಡನೆ ಚರ್ಚಿಸಿ ಮದುವೆಗೆ ಸಮ್ಮತಿಸಿದನು.ಬಂದ ರಾಜಪ್ರತಿನಿಧಿಗಳನ್ನು ಸಂಮಾನಿಸಿ ಬೀಳ್ಕೊಟ್ಟನು.


ಮರುದಿನವೇ ದಶರಥನು ಗುರುವೃಂದ, ಚತುರಂಗಬಲ ಹಾಗೂ ಎಲ್ಲಾ ಬಂಧು ಬಾಂಧವರೊಡನೆ ಮಿಥಿಲೆಗೆ ಹೊರಟನು. ಮಿಥಿಲೆಗೆ ತಲುಪಿದ ದಶರಥ ಹಾಗೂ ಅವನ ಪರಿವಾರವನ್ನು ಜನಕನು ಅದ್ದೂರಿಯಾಗಿ ಸ್ವಾಗತಿಸಿ ಸಂಮಾನಿಸಿದನು.ಜನಕನು ಸಾಂಕಾಶ್ಯಾನಗರಿಯಲ್ಲಿರುವ ತನ್ನ ತಮ್ಮ ಕುಶಧ್ವಜನನ್ನು ಕರೆಸಿಕೊಂಡನು.


ಜನಕನ ಆಸ್ಥಾನದಲ್ಲಿ ಎರಡೂ ಕಡೆಯ ಪ್ರಮುಖರು ಆಸೀನರಾದರು. ವಸಿಷ್ಠರು ಬ್ರಹ್ಮ ನಿಂದ ಆರಂಭಿಸಿ ಅಯೋಧ್ಯೆಯ ಮೊದಲ ರಾಜ ಇಕ್ಷ್ವಾಕುವಿನಿಂದ ದಶರಥನ ತನಕವಿರುವ ವಂಶ ವಿವರಣೆಯನ್ನು ವಿಸ್ತಾರವಾಗಿ ಹೇಳಿ ದಶರಥನನ್ನೂ ಅವನ ಮಕ್ಕಳಾದ ರಾಮ ಲಕ್ಷ್ಮಣರನ್ನು ಪರಿಚಯಿಸಿ ಜನಕನಲ್ಲಿ ಅವನ ಮಗಳಂದಿರನ್ನು ಇವರಿಗೆ ಮದುವೆ ಮಾಡಿ ಕೊಡಬೇಕೆಂದು ವಿನಂತಿಸಿದರು.
ಜನಕನು ನಿಮಿಯಿಂದ ತೊಡಗಿ ತನ್ನ ಹಾಗೂ ತನ್ನ ತಮ್ಮ ಕುಶಧ್ವಜನ ವರೆಗಿನ ತನ್ನ ವಂಶಾವಳಿಯನ್ನು ಪರಿಚಯಿಸಿದನು.ಬಳಿಕ ಸೀತಾ ಊರ್ಮಿಳೆಯರನ್ನು ರಾಮ ಲಕ್ಷ್ಮಣರಿಗೆ ಮದುವೆ ಮಾಡಿಕೊಡುವ ನಿರ್ಣಯ ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ವಿಶ್ವಾಮಿತ್ರರು ಕುಶಧ್ವಜನ ಮಗಳಂದಿರಾದ ಮಾಂಡವಿ ಶ್ರುತಕೀರ್ತಿಯರನ್ನು ಭರತ ಶತ್ರುಘ್ನರಿಗೆ ಮದುವೆ ಮಾಡಿಕೊಡುವ ಪ್ರಸ್ತಾಪ ಮುಂದಿಟ್ಟಾಗ ಎಲ್ಲರೂ ಸಂತಸದಿಂದ ಒಪ್ಪಿಗೆ ನೀಡಿದರು. ಅಂತೂ ಈ ಹಿಂದೆ ನಡೆದಿಲ್ಲ ಇನ್ನು ಮುಂದೆ ನಡೆಯದು ಎನ್ನುವ ರೀತಿಯಲ್ಲಿ ಸೀತಾ ರಾಮರ ಕಲ್ಯಾಣೋತ್ಸವ ನಡೆಯಿತು. ಇವರೊಂದಿಗೆ ಲಕ್ಷ್ಮಣ- ಊರ್ಮಿಳೆ,ಭರತ-ಮಾಂಡವಿ, ಶತ್ರುಘ್ನ- ಶ್ರುತಿಕೀರ್ತಿರ ಮದೆವೆಗಳೂ ವೈಭವದಿಂದ ನಡೆದವು. ದಶರಥ-ಜನಕರ ಆನಂದಕ್ಕೆ ಪಾರವೇ ಇಲ್ಲದಂತಾಯಿತು.


ವಿಶ್ವಾಮಿತ್ರರ ಆಶಯ ಈಡೇರಿತು. ಜನಕ-ದಶರಥರ ಅನುಮತಿಯನ್ನು ಪಡೆದು ಹಿಮವತ್ಪರ್ವತಕ್ಕೆ ತೆರಳಿದರು. ರಾಮಾವತಾರದ ಉದ್ದೇಶದ ಈಡೇರಿಕೆಗೆ ಭದ್ರಬುನಾದಿ ವಿಶ್ವಾಮಿತ್ರರ ಯಜ್ಞರಕ್ಷಣೆಯಲ್ಲವೇ?
ಎಷ್ಟಾದರೂ ರಾಮನು ವಿಶ್ವಾಮಿತ್ರ ಪ್ರಿಯಕರ ರಾಮ-ಅಲ್ಲವೇ?

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top